Subscribe: Adige Recipes - ಅಡಿಗೆ ಸವಿರುಚಿ
http://indiankannadarecipes.blogspot.com/rss.xml
Added By: hsks Feedage Grade B rated
Language: Kannada
Tags:
Rate this Feed
Rating: 3 starRating: 3 starRating: 3 starRate this feedRate this feed
Rate this feed 1 starRate this feed 2 starRate this feed 3 starRate this feed 4 starRate this feed 5 star

Comments (0)

Feed Details and Statistics Feed Statistics
Preview: Adige Recipes - ಅಡಿಗೆ ಸವಿರುಚಿ

Adige Recipes-ಅಡಿಗೆ ಸವಿರುಚಿ



Collection of Recipes. - ಕನ್ನಡ ಅಡಿಗೆ ರೆಸಿಪಿಸ್



Last Build Date: Tue, 12 Dec 2017 08:34:32 +0000

 



ರವೆಉಂಡೆ - Rava Unde / Sooji Laddu

Fri, 04 Mar 2016 18:11:00 +0000

ಮಹಾಶಿವರಾತ್ರಿ ಹಬ್ಬದ ಶುಭಾಷಯಗಳು.
ಮಹಾಶಿವರಾತ್ರಿ ಹಬ್ಬದ ಶುಭಾಷಯಗಳೊಂದಿಗೆ ರವೆಉಂಡೆ ತಯಾರಿಸುವ ಲಿಂಕ್ ಅನ್ನು ತಿಳಿಸಲಾಗಿದೆ, 

ಹಾಲಿನ ಪುಡಿಯ ಬದಲು ಸ್ವಲ್ಪ ಹಾಲನ್ನು ಬೆರೆಸಿ ಉಂಡೆ ತಯಾರಿಸಿಕೊಂಡು ಹಬ್ಬದ ಸಿಹಿಯನ್ನು ಸವಿಯಿರಿ.
Rave Unde - Click this link:
ರವೆಉಂಡೆ :

RAVA UNDE, SOOJI LADDU


SHIVARATRI HABBADA SHUBHASHAYAGALU






ಈರುಳ್ಳಿ ಟಮೋಟ ಚಟ್ನಿ: Onion Tomato chutney

Wed, 02 Mar 2016 17:44:00 +0000

ಈರುಳ್ಳಿ  ಟಮೋಟ ಚಟ್ನಿ:

ಬೇಕಾಗುವ ಸಾಮಗ್ರಿಗಳು:

1. ಈರುಳ್ಳಿ- 2
 2. ಟೊಮೆಟೊ- 4-5
3. ಹಸಿಮೆಣಸಿನ ಕಾಯಿ- 2
4. ಉಪ್ಪು- ರುಚಿಗೆ ತಕ್ಕಷ್ಟು
5. ಅಚ್ಚ ಖಾರದ ಪುಡಿ- 1 ಟೀಚಮಚ
6. ಎಣ್ಣೆ- 1 ಟೀಚಮಚ
7. ಸಾಸಿವೆ- 1 ಟೀಚಮಚ

ಮಾಡುವ ವಿಧಾನ :

1. ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
2. ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.
3. ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಉಪ್ಪು ಮತ್ತು ಖಾರದ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
 4. ಟೊಮೆಟೊ ನೀರು ಬಿಟ್ಟುಕೊಳ್ಳುವುದರಿಂದ ನೀರು ಹಾಕುವ ಅಗತ್ಯವಿಲ್ಲ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.
5. ನಂತರ ಪಾತ್ರೆಗೆ ಹಾಕಿಕೊಳ್ಳಿ.
6. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಹಾಕಿ ಇದನ್ನು ಚಟ್ನಿಗೆ ಹಾಕಿ ಕಲಸಿ. ಈರುಳ್ಳಿ ಟೊಮೆಟೊ ಚಟ್ನಿಯನ್ನು ದೋಸೆ, ಚಪಾತಿ ಅಥವ ಅನ್ನದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.



Banana Sweet Dosa - ಬಾಳೆಹಣ್ಣಿನ ಬೆಲ್ಲದ ದೋಸೆ:

Fri, 22 May 2015 18:26:00 +0000

ಬಾಳೆಹಣ್ಣಿನ ಬೆಲ್ಲದ ದೋಸೆ:

ಬೇಕಾಗುವ ಸಾಮಗ್ರಿಗಳು:

. ಬಾಳೇಹಣ್ಣು- 2 (ಹೆಚ್ಚಿಕೊಳ್ಳಿ)
. ಹಿಟ್ಟು- 125 ಗ್ರಾಂ
. ದಾಲ್ಚಿನ್ನಿ ಪುಡಿ- 1 ಟೀಚಮಚ
. ಬೂರಾ ಸಕ್ಕರೆ- 3 ಟೀಚಮಚ
. ಬೆಲ್ಲ ( ಸಕ್ಕರೆಯ ಬದಲು)
.  ಹಾಲು- 120 ಮಿಲಿ
. ಎಣ್ಣೆ
. ಮೇಲೆ ಹಾಕಲು ಜೇನು ತುಪ್ಪ (ಬೇಕಾದರೆ)

ಮಾಡುವ ವಿಧಾನ
. ಬಾಳೆಹಣ್ಣನ್ನು ಕತ್ತರಿಸಿಕೊಳ್ಳಿ.
. ಒಂದು ಪಾತ್ರೆಗೆ ಹಿಟ್ಟು, ಬೇಕಿಂಗ್ ಪೌಡರ್, ದಾಲ್ಚಿನ್ನಿ ಪುಡಿ ಮತ್ತು ಸಕ್ಕರೆ ಸೇರಿಸಿ ಮಿಶ್ರ ಮಾಡಿ.
ಇದಕ್ಕೆ ಸಕ್ಕರೆಯ ಬದಲು ಬೆಲ್ಲವನ್ನು ಸೇರಿಸಿಕೊಳ್ಳಬಹುದು.
. ನಂತರ ಅದಕ್ಕೆ ಹಾಲನ್ನು ಸೇರಿಸಿ ಒಂದು ಹದಕ್ಕೆ ಬರುವಂತೆ ನಯವಾಗಿ ಕಲಸಿಕೊಳ್ಳಿ.
. ಈ ಮಿಶ್ರಣಕ್ಕೆ ಬಾಳೆಹಣ್ಣನ್ನು ಸೇರಿಸಿ.
. ಹೆಂಚಿನ ಮೇಲೆ ಒಂದು ಚಮಚ ಎಣ್ಣೆ ಹಾಕಿ ಅದು ಕಾದ ನಂತರ ಕಲಸಿಟ್ಟುಕೊಂಡ ಮಿಶ್ರಣವನ್ನು ಅದರ ಮೇಲೆ ಹಾಕಿ.
. ಅದನ್ನು ದೋಸೆಯ ಹಾಗೆ ಹೆಂಚಿನ ತುಂಬ ವೃತ್ತಾಕಾರದಲ್ಲಿ ಪಸರಿಸಿ ಕೆಂಪಾಗುವವರೆಗೆ ಸುಡಿ.
. ದೋಸೆ ಹುಯ್ಯುವಂತೆ ಇವುಗಳನ್ನು ತಯಾರಿಸಿ ಒಂದು ಚಮಚ ಜೇನುತುಪ್ಪವನ್ನು ಎಲ್ಲದರ ಮೇಲೆ ಹಾಕಿ.
ಬಾಳೆಹಣ್ಣಿನ ಬೆಲ್ಲದ ದೋಸೆ ಸವಿಯಲು ರೆಡಿ.




ಹಲಸಂದೆಕಾಳು ಉಸಲಿ: Halasande Kaalu usali:

Thu, 28 Aug 2014 08:30:00 +0000

ಹಲಸಂದೆಕಾಳು ಉಸಲಿ:

ಸಾಮಗ್ರಿಗಳು:

ಹಲಸಂದೆಕಾಳು ಒಂದು ಬಟ್ಟಲು

ಹೆಚ್ಚಿದ ಈರುಳ್ಳಿ ಸ್ವಲ್ಪ

ಹೆಚ್ಚಿದ ಹಸಿಮೆಣಸಿನಕಾಯಿ

ಎಣ್ಣೆ, ಸಾಸಿವೆ

ಕರಿಬೇವು

ಉಪ್ಪು ರುಚಿಗೆ

ಕೊತ್ತುಂಬರಿಸೊಪ್ಪು

ಕಾಯಿತುರಿ

ನೀರು ಬೇಯಿಸಲು ಬೇಕಾಗುವಷ್ಟು

ವಿಧಾನ:

ಹಲಸಂದೆಕಾಳುಗಳನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ ಅರ್ಧ ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ, ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.

ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ , ಬೇಯಿಸಿರುವ ಕಾಳನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ, ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ, ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.
*ಹಲ್ಸಂದೆ ಕಾಳುಗಳು ಎರಡು ಬಣ್ಣಗಳಲ್ಲಿ ಸಿಗುತ್ತದೆ, ಕೆಂಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಹೈಬ್ರೀಡ್ ಕಾಳುಗಳು ಅಷ್ಟು ರುಚಿ ಇರುವುದಿಲ್ಲ.  ಇಂಗ್ಲೀಷ್ ನಲ್ಲಿ ಬ್ಲಾಕ್ ಐ ಬೀನ್ ಎಂದು  ಕರೆಯುತ್ತಾರೆ. ಈ ಕಾಳುಗಳು ಆರೋಗ್ಯಕ್ಕೂ ಉತ್ತಮ. ಇದನ್ನು ಮೊಳಕೆ ತೆಗೆದು ಸಾರಿಗೆ ಬಳಸಬಹುದು, ಇಲ್ಲವೆಂದರೆ ಹಾಗೆ ನೇರವಾಗಿಯೇ ಕಾಳುಗಳನ್ನು ಬೇಯಿಸಿಕೊಂಡು ಸಾರನ್ನು ತಯಾರಿಸಬಹುದು. ಅನ್ನ, ಮುದ್ದೆ, ಚಪಾತಿ,ರೊಟ್ಟಿಗಳಿಗೆ ಚೆನ್ನಾಗಿರುತ್ತದೆ.



ಈರುಳ್ಳಿ ಬೆಂಡೆಕಾಯಿ ಪಕೋಡ: Onion Okra Pakoda: Bendekaayi pakoda

Sat, 26 Apr 2014 05:41:00 +0000


ಈರುಳ್ಳಿ ಬೆಂಡೆಕಾಯಿ ಪಕೋಡ:

ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ - 7-8
ಈರುಳ್ಳಿ - ಎರಡು ದೊಡ್ಡದು
ಕಡ್ಲೆಹಿಟ್ಟು - ಒಂದು ಕಪ್
ಖಾರದ ಪುಡಿ ( ಅಚ್ಚ ಮೆಣಸಿನ ಪುಡಿ) - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಓಮಕಾಳು - ಅರ್ಧ ಚಮಚ( ಬೇಕಾದರೆ)
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಮೊದಲು ಈರುಳ್ಳಿಯನ್ನು ಅರ್ಧಕ್ಕೆ ಕತ್ತರಿಸಿ ಉದ್ದಕ್ಕೆ ಹೆಚ್ಚಿಕೊಳ್ಳಿ ಅಥವಾ ಮಧ್ಯಕ್ಕೆ ಕತ್ತರಿಸಿ ಸ್ಲೈಸ್ ಮಾಡಿಕೊಂಡು ಅದನ್ನು ಬೇರ್ಪಡಿಸಿಟ್ಟುಕೊಳ್ಳಿ.
ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ, ಅದನ್ನು ಸಣ್ಣಗೆ ತುಂಬಾ (ದಪ್ಪ ಹೋಳುಗಳನ್ನಾಗಿ ಹೆಚ್ಚದೆ) ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ(ಥಿನ್ ಸ್ಲ್ಯೆಸ್ ತರಹ)
ನಂತರ ಒಂದು ಪಾತ್ರೆಗೆ ಕಡ್ಲೆಹಿಟ್ಟು, ಖಾರದ ಪುಡಿ, ಓಮಕಾಳು  ಮತ್ತು ಉಪ್ಪು ಹಾಕಿ ಬೆರೆಸಿ, ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮತ್ತು ಹೆಚ್ಚಿದ ಬೆಂಡೆಕಾಯಿಯ ಸಣ್ಣ ಹೋಳುಗಳು  ಸೇರಿಸಿ, ಅಕ್ಕಿಹಿಟ್ಟು ಸ್ವಲ್ಪ ಒಂದು / ಎರಡು ಚಮಚದಷ್ಟು, ಕಡ್ಲೆಹಿಟ್ಟು ಹೇಗೆ  ತಗೋತಿರೋ ಅದರ ಅಳತೆ ನೋಡಿಕೊಂಡು ಹಾಕಿ. ಹಾಗೂ ಒಂದೆರಡು ಚಮಚ ಕಾದ ಎಣ್ಣೆಯನ್ನು ಹಾಕಿ, ಚೆನ್ನಾಗಿ ಕಲೆಸಿ. ನೀರು ಅವಶ್ಯಕತೆ ಇದ್ದರೆ ಮಾತ್ರ ಸ್ವಲ್ಪ ಹಾಕಿಕೊಳ್ಳಿ, ಯಾಕೆಂದರೆ ಈರುಳ್ಳಿಯು ಕಲೆಸಿದಾಗ ನೀರು ಬಿಡುತ್ತದೆ. ತುಂಬಾ ತೆಳ್ಳಗೆ ಹಿಟ್ಟನ್ನು ಕಲೆಸಬೇಡಿ, ಗಟ್ಟಿಯಾಗಿ ಇರಲಿ. ಕೈ ಅಥವ ಚಮಚದಲ್ಲಿ ತೆಗೆದುಕೊಳ್ಳುವಷ್ಟು ಕಲೆಸಿಕೊಳ್ಳಿ. ನಂತರ ಈ ಕಲೆಸಿದ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಸ್ವಲ್ಪ ತೆಳುವಾಗಿ ಸ್ವಲ್ಪ ಸ್ವಲ್ಪವೇ ಹಿಟ್ಟು ಪಕೋಡಾ ತರಹ ಹಾಕಿ ಕರಿಯಿರಿ. ತುಂಬಾ ದಪ್ಪ ಮಿಶ್ರಣ ಹಾಕಿದರೆ ಒಳಗೆ ಹಿಟ್ಟು ಬೇಯುವುದಿಲ್ಲ, ಅದಕ್ಕೆ ತೆಳುವಾಗಿ ಹಾಕಿ. ಗೊಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಅಥವಾ ಗರಿಗರಿಯಾಗುವವರೆಗೂ ಕರಿದು, ಪೇಪರ್ ಟವಲ್ ಮೇಲೆ ಹಾಕಿ, ಹೆಚ್ಚುವರಿ ಎಣ್ಣೆ ಕಮ್ಮಿ ಆಗುತ್ತದೆ, ನಂತರ ತಿನ್ನಲು ನೀಡಿ. ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಊಟಕ್ಕೆ ನೆಂಚಿಕೊಳ್ಳಲು / ಕಾಫಿ ಹೊತ್ತಿಗೆ ಅಥವ ಯಾರಾದರೂ ಅತಿಥಿಗಳಿಗೆ ನೀಡಲು ತಕ್ಷಣ ತಯಾರಿಸಿಕೊಳ್ಳಬಹುದು. ಇದಕ್ಕೆ ಚಟ್ನಿಯ ಅವಶ್ಯಕತೆ ಇಲ್ಲ, ಬೇಕಾದರೆ ತಯಾರಿಸಿಕೊಳ್ಳಬಹುದು.

*ಟಮೋಟೊ ಸಾಸ್ ನೊಂದಿಗೆ ಸವಿಯಲು ಕೊಡಿ.

* ಸಾಮಾನ್ಯವಾಗಿ ಮಕ್ಕಳು ಬೆಂಡೆಕಾಯಿಯನ್ನು ತಿನ್ನಲು ಇಷ್ಟಪಡುವುದಿಲ್ಲ. ಬೆಂಡೆಕಾಯಿ ಕೆಲವು ಮಕ್ಕಳಿಗೆ ಇಷ್ಟವಾಗುತ್ತದೆ . ತಿನ್ನದೆ ಇರುವ ಮಕ್ಕಳಿಗೆ ಈ ರೀತಿ ಪಕೋಡ ತರಹ ತಯಾರಿಸಿಕೊಟ್ಟರೆ ಸುಮ್ಮನೆ ತಿನ್ನುತ್ತಾರೆ. ಅಲ್ಲದೇ ಅದಕ್ಕೆ ಬೆಂಡೆಕಾಯಿ ಸೇರಿಸಿದಿವಿ ಅಂತ ಹೇಳಿದರೆ ಮಾತ್ರ ಗೊತ್ತಾಗುತ್ತದೆ. ಇಲ್ಲ ಅಂದರೆ ಗೊತ್ತಾಗುವುದಿಲ್ಲ.
* ಎಲ್ಲರಿಗೂ ತಿಳಿದಿರುವಂತೆ ಬೆಂಡೆಕಾಯಿ ಆರೋಗ್ಯಕ್ಕೆ ಅತ್ತ್ಯುತ್ತಮವಾದ ತರಕಾರಿ, ಇದರಲ್ಲಿ ನಾರಿನ ಅಂಶ ಹೆಚ್ಚಾಗಿದೆ, ಬುದ್ಧಿಶಕ್ತಿಗೆ, ಮೆಮೋರಿಗೆ ಒಳ್ಳೆಯದು.


Media Files:
http://indiankannadarecipes.blogspot.com




Bisi Bhele Bhath Powder : ಬಿಸಿಬೇಳೆಬಾತ್ ಪುಡಿ

Wed, 02 Oct 2013 17:51:00 +0000

ಬಿಸಿಬೇಳೆಬಾತ್ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು

ಕಡಲೆಕಾಳು- 1 ಟೀಚಮಚ
ಉದ್ದಿನಬೇಳೆ- 1 ಟೀಚಮಚ
ಧನಿಯ- 1/2 ಚಮಚ
ಜೀರಿಗೆ- 1 ಚಮಚ
ಮೆಣಸು- 5
ಒಣ ಮೆಣಸಿನಕಾಯಿ- 2
ಗಸಗಸೆ- 1 ಟೀಚಮಚ
ಒಣಕೊಬ್ಬರಿ- 1 ಟೀಚಮಚ
ಅಕ್ಕಿ- 1/2 ಟೀ ಚಮಚ
ಅರಿಶಿಣ- 1/4 ಟೀ ಚಮಚ
ಸಾಸಿವೆ- 1/2 ಟೀಚಮಚ
ದಾಲ್ಚಿನ್ನಿ- 1
ಏಲಕ್ಕಿ- 1
ಲವಂಗ-1
ಮೆಂತ್ಯೆ- ಸ್ವಲ್ಪ
ಕರಿಬೇವು- ಸ್ವಲ್ಪ
ಇಂಗು- 1/4 ಟೀಚಮಚ

ಮೇಲೆ ತಿಳಿಸಿರುವ ಎಲ್ಲಾ ಸಮಾಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಂಡು ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ.  ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ. ಬಿಸಿಬೇಳೆಬಾತ್ ತಯಾರಿಸುವಾಗ ಬೇಳೆ ಮತ್ತು ಅಕ್ಕಿಯನ್ನು ಬೇಯಿಸಿಕೊಂಡು, ಈ ಪುಡಿಯನ್ನು ಉಪಯೋಗಿಸಿ.




Holige / obbattu - "ಹೋಳಿಗೆ"

Tue, 06 Aug 2013 06:07:00 +0000

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾಡಬೇಕು. ಹೋಳಿಗೆ,ಕಡುಬು,ಪಾಯಸ,ಹಾಲು ಹೋಳಿಗೆ,ಮೋದಕ,ಶ್ಯಾವಿಗೆ,ಪೊಂಗಲ್,ಖೀರು ಮತ್ತು ಸಿಹಿ ಉಂಡೆಗಳು ಹೀಗೆ ಇನ್ನು ವಿವಿಧ ರೀತಿಯ ಸಿಹಿ ಅಡಿಗೆಗಳಿವೆ.  
ಶ್ರಾವಣ ಮಾಸ ಬಂದಾಗ, ಹಬ್ಬಗಳು ಬಂದಾಗ ಮನೆಯಲ್ಲಿ ಹಬ್ಬದ ವಾತಾವರಣವಿದ್ದಾಗ, ಅಡುಗೆ ಮನೆಯಲ್ಲಿ ಸಿಹಿ ಅಡುಗೆಗಳ ಸಂಭ್ರಮ.

* ಶ್ರೀ ವರಮಹಾಲಕ್ಷ್ಮೀ  ಹಬ್ಬದ ಶುಭಾಷಯಗಳು !! 


(object) (embed)
best wishes

"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು”ಹೋಳಿಗೆ’ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ  ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಅದರಲ್ಲಿ ತುಂಬಾ ಹೆಸರಾಗಿರುವುದು ಬೇಳೆ ಹೋಳಿಗೆ. ಅದನ್ನು ತಯಾರಿಸುವ ರೀತಿ ತಿಳಿಯೋಣ.

ಹೋಳಿಗೆಯನ್ನು ತಯಾರಿಸಲು ಹೋಳಿಗೆ / ಒಬ್ಬಟ್ಟು ಲೇಬಲ್ ನಲ್ಲಿ ನೋಡಿ.
ಅಥವಾ ಈ ಲಿಂಕ್ ಅನ್ನು ನೋಡಿ. ಅದರಲ್ಲಿ ನಿಮಗೆ ಹೋಳಿಗೆ / ಒಬ್ಬಟ್ಟು ತಯಾರಿಸುವ ರೀತಿ ಮತ್ತು ಹೋಳಿಗೆ ಸಾರು ತಯಾರಿಸುವ ರೀತಿ ಎಲ್ಲವನ್ನು ಸವಿವರವಾಗಿ ತಿಳಿಸಲಾಗಿದೆ, ಓದಿ ನೋಡಿ, ನಿಮ್ಮ ಮನೆಯಲ್ಲಿಯೂ ರುಚಿಯಾದ ಹೋಳಿಗೆ ತಯಾರಿಸಿ ಹಬ್ಬದ ಊಟವನ್ನು ಸವಿಯಿರಿ.
ವರಮಹಾಲಕ್ಷ್ಮೀ ಹಬ್ಬದ ಶುಭಾಷಯಗಳು.
http://indiankannadarecipes.blogspot.in/2011/08/holige-obbattu-saaru.html


Media Files:
http://indiankannadarecipes.blogspot.in/2011/08/holige-obbattu-saaru.html




Tomato Chutni - ಟಮೋಟ ಚಟ್ನಿ:

Sun, 18 Sep 2011 07:57:00 +0000

ಟಮೋಟ ಚಟ್ನಿ:

ಬೇಕಾಗುವ ಸಾಮಗ್ರಿಗಳು:

ಟಮೋಟ - ಅರ್ಧ ಕೆ.ಜಿ
ಈರುಳ್ಳಿ - ಎರಡು
ಬೆಳ್ಳುಳ್ಳಿ - ಹತ್ತು ಎಸಳು
ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು
ಹುಣಸೆಹಣ್ಣು - ಚಿಕ್ಕ ಗೋಲಿ ಗಾತ್ರ
ಉಪ್ಪು ರುಚಿಗೆ
ಕೊತ್ತುಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ

ಒಗ್ಗರಣೆಗೆ:
ಎಣ್ಣೆ - ಎರಡು/ನಾಲ್ಕು ಚಮಚ
ಸಾಸಿವೆ,ಜೀರಿಗೆ,ಇಂಗು
ಉದ್ದಿನಬೇಳೆ - ಒಂದು ಚಮಚ

ತಯಾರಿಸುವ ವಿಧಾನ:
ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ,ಕಾದ ನಂತರ ಈರುಳ್ಳಿ,ಬೆಳ್ಳುಳ್ಳಿ ಮತ್ತು ಒಣಮೆಣಸಿನಕಾಯಿಗಳನ್ನು ಹಾಕಿ ಎರಡು ನಿಮಿಷ ಹುರಿಯಿರಿ,ಅದಕ್ಕೆ ಹೆಚ್ಚಿದ ಟಮೋಟಗಳನ್ನು ಹಾಕಿ,ಸ್ವಲ್ಪ ಮೆತ್ತಗಾಗುವಂತೆ ಬೇಯಿಸಿ,ಬೆಂದ ಮೇಲೆ ಒಲೆಯಿಂದ ಇಳಿಸಿ,ಅದರ ಜೊತೆಗೆ ಕೊತ್ತುಂಬರಿಸೊಪ್ಪು,ಕರಿಬೇವು,ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ,ಮಿಕ್ಸಿಗೆ ಹಾಕಿ ಅರೆಯಿರಿ.ನೀರು ಅವಶ್ಯಕತೆ ಇಲ್ಲ,ತುಂಬಾ ನುಣ್ಣಗೆ ರುಬ್ಬಬೇಕಾಗಿಲ್ಲ.
ನಂತರ ಒಗ್ಗರಣೆ ಹಾಕಿ, ಅರೆದಿರುವ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ,ಹಸಿವಾಸನೆ ಹೋಗುವವರೆಗೂ, ಸ್ವಲ್ಪ ಗಟ್ಟಿಯಾಗುವವರೆಗೂ ಚೆನ್ನಾಗಿ ಕುದಿಸಿ,ಮಧ್ಯೆ ತಿರುಗಿಸುತ್ತಿರಿ,ತಳಹತ್ತದಂತೆ ನೋಡಿಕೊಂಡು ಗಟ್ಟಿಯಾದ ನಂತರ ಇಳಿಸಿ.
ಇದು ದೋಸೆ,ಇಡ್ಲಿ,ಚಪಾತಿ ಮತ್ತು ಪಕೋಡಗಳಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
ಬ್ರೆಡ್ ಸ್ಲೈಸ್ ಮಧ್ಯೆ ಹಚ್ಚಿಕೊಂಡು ಟೋಸ್ಟ್ ಮಾಡಿಕೊಂಡು ಸಹ ತಿನ್ನಬಹುದು. ಟೋಸ್ಟ್ ಮಾಡದೆಯೂ ತಿನ್ನಬಹುದು.


Media Files:
http://indiankannadarecipes.blogspot.com/chutney




Kadubu - Karjikayi - Holige : ಶ್ರೀ ಸಿದ್ಧಿವಿನಾಯಕ ಗಣಪತಿ

Mon, 29 Aug 2011 09:13:00 +0000

 ಶ್ರೀ ಗೌರಿ ಮತ್ತು ಶ್ರೀ ಗಣೇಶ ಹಬ್ಬದ ಶುಭಾಷಯಗಳು.

ಶ್ರೀ ಸಿದ್ಧಿವಿನಾಯಕ ಗಣಪತಿ
                        
                                              ಮುಂಬಯಿ ನಗರದ ಶ್ರೀ ಸಿದ್ಧಿವಿನಾಯಕ ಗಣಪತಿ

 ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಷು ಸರ್ವದಾ ||


ಶ್ರೀ ಸಿದ್ಧಿವಿನಾಯಕ ಗಣಪತಿಗಾಗಿ ಕಡುಬನ್ನು ತಯಾರಿಸುತ್ತೇವೆ. ಗಣೇಶನು ಕಡುಬು ಪ್ರಿಯನು.ಮೋದಕ ಪ್ರಿಯನು ಸಹ. ಕುರುಕುತಿಂಡಿಯೂ ಸಹ ಆತನಿಗೆ ಅಚ್ಚುಮೆಚ್ಚು.

ಕುರುಕು ತಿಂಡಿಗೆ ಲೇಬಲ್ ನಲ್ಲಿರುವ  SNACKS  ಲಿಂಕ್ ನೋಡಿ.

Chakkuli
Kodubale - Spicy Rings

ಕಡುಬಿನ ರೆಸಿಪಿಗಾಗಿ  ಇಲ್ಲಿ ತಿಳಿಸಿರುವ ಲಿಂಕ್ ಅನ್ನು ನೋಡಿ.

Khara Kadubu - Hesarubele kadubu- Moongdal Kadubu
Karida Kadubu - Karigadubu
Karjikaayi - Sweet kadubu
Kadubina Hittu
Sihi Kadubu

ಮೇಲೆ ತಿಳಿಸಿರುವ ಲಿಂಕ್ ನಲ್ಲಿ, ಅಕ್ಕಿಹಿಟ್ಟು/ಕಡುಬಿನ ಮುದ್ದೆ ತಯಾರಿಸುವ ರೀತಿ, ಖಾರ ಕಡುಬು, ಸಿಹಿ ಕಡುಬು, ಕರ್ಜಿಕಾಯಿ, ಕರಿದ ಕಡುಬು ಅಥವಾ ಕರಿಗಡುಬು ಈ ಅಡಿಗೆಗಳನ್ನು ವಿವರವಾಗಿ ಬರೆಯಲಾಗಿದೆ.
ಗೌರಿ ಹಬ್ಬಕ್ಕಾಗಿ ಹೋಳಿಗೆ/ಒಬ್ಬಟ್ಟು ವಿಶೇಷತೆ , ಅದನ್ನು ಹೋಳಿಗೆ/ ಒಬ್ಬಟ್ಟು ಲೇಬಲ್ ನಲ್ಲಿ ನೋಡಿ.
Holige - obbattu


Media Files:
http://indiankannadarecipes.blogspot.com/snacks.html




Rave Unde- Rava laddu-Soji Laddu

Wed, 17 Aug 2011 19:00:00 +0000

Sree Krishna Janmastami Special
Happy Krishnaastami


Rave Unde - Click this link:


Media Files:
http://indiankannadarecipes.blogspot.com




Kadubu-ಕಡುಬು

Wed, 17 Aug 2011 18:43:00 +0000

ಕಡುಬು ತಯಾರಿಸುವ ವಿಧಾನವನ್ನು ತಿಳಿಯಲು ಲೇಬಲ್ಸ್ ನಲ್ಲಿ ಕಡುಬು ಕ್ಲಿಕ್ ಮಾಡಿನೋಡಿ.



Holige & Obbattu Saaru - ಹೋಳಿಗೆ & ಹೋಳಿಗೆ ಸಾರು:

Thu, 04 Aug 2011 09:13:00 +0000

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾಡಬೇಕು. ಹೋಳಿಗೆ,ಕಡುಬು,ಪಾಯಸ,ಹಾಲು ಹೋಳಿಗೆ,ಮೋದಕ,ಶ್ಯಾವಿಗೆ,ಪೊಂಗಲ್,ಖೀರು ಮತ್ತು ಸಿಹಿ ಉಂಡೆಗಳು ಹೀಗೆ ಇನ್ನು ವಿವಿಧ ರೀತಿಯ ಸಿಹಿ ಅಡಿಗೆಗಳಿವೆ.  ಶ್ರಾವಣ ಮಾಸ ಬಂದಾಗ, ಹಬ್ಬಗಳು ಬಂದಾಗ ಮನೆಯಲ್ಲಿ ಹಬ್ಬದ ವಾತಾವರಣವಿದ್ದಾಗ, ಅಡುಗೆ ಮನೆಯಲ್ಲಿ ಸಿಹಿ ಅಡುಗೆಗಳ ಸಂಭ್ರಮ.* ಶ್ರೀ ವರಮಹಾಲಕ್ಷ್ಮೀ  ಹಬ್ಬದ ಶುಭಾಷಯಗಳು !! best wishes "ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು”ಹೋಳಿಗೆ’ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ  ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಅದರಲ್ಲಿ ತುಂಬಾ ಹೆಸರಾಗಿರುವುದು ಬೇಳೆ ಹೋಳಿಗೆ. ಅದನ್ನು ತಯಾರಿಸುವ ರೀತಿ ತಿಳಿಯೋಣ.ತೊಗರಿಬೇಳೆ ಹೋಳಿಗೆ:ಬೇಕಾಗುವ ಸಾಮಗ್ರಿಗಳು:ತೊಗರಿಬೇಳೆ - ಅರ್ಧ ಕೆಜಿತೆಂಗಿನಕಾಯಿ ತುರಿ - ಒಂದು ಬಟ್ಟಲುಬೆಲ್ಲ ರುಚಿಗೆ - ಕುಟ್ಟಿರುವುದುಏಲಕ್ಕಿ ಪುಡಿ ಸ್ವಲ್ಪಮೈದಾಹಿಟ್ಟು - ಎರಡು ಬಟ್ಟಲುಚಿರೋಟಿ ರವೆ - ಕಾಲು ಕಪ್ಹಾಲು - ಕಾಲು ಕಪ್ತುಪ್ಪ - ಎರಡು ಚಮಚಚಿಟಿಕೆ ಅರಿಸಿನಉಪ್ಪು ಚಿಟಿಕೆಎಣ್ಣೆತಯಾರಿಸುವ ವಿಧಾನ:ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ,ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ[...]


Media Files:
http://indiankannadarecipes.blogspot.com/2007/06/holige-obbattu.html




Simple GoLiBaje - ಗೋಳಿ ಬಜೆ:

Mon, 25 Jul 2011 19:10:00 +0000

ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ.


ಗೋಳಿ ಬಜೆ:

ಬೇಕಾಗುವ ಸಾಮಗ್ರಿಗಳು:

ಮೈದಾ ಹಿಟ್ಟು - ಒಂದು ಬಟ್ಟಲು
ಮೊಸರು - ಒಂದು ಬಟ್ಟಲು/ ಕಲೆಸಲು ಬೇಕಾಗುವಷ್ಟು
ಸಕ್ಕರೆ ಪುಡಿ - ಅರ್ಧ ಚಮಚಸೋಡ- ಚಿಟಿಕೆ
ಉಪ್ಪು- ರುಚಿಗೆ ಬೇಕಾಗುವಷ್ಟು
ಎಣ್ಣೆ - ಕರಿಯಲು

ತಯಾರಿಸುವ ವಿಧಾನ:

ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.


ಮೈದಾಗೆ ಸೋಡಾ ಪುಡಿ,ಉಪ್ಪು,ಸಕ್ಕರೆಪುಡಿ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಮೊಸರು ಹಾಕಿ ಗಟ್ಟಿಯಾಗಿ ಕಲೆಸಿ.ತುಂಬಾ ತೆಳ್ಳಗೆ ಇರಬಾರದು, ಇಡ್ಲಿ ಹಿಟ್ಟಿಗಿಂತ ಗಟ್ಟಿ ಇರಬೇಕು. ಕೈನಲ್ಲಿ ತೆಗೆದುಕೊಂಡು ಬಿಡುವಂತಿರಬೇಕು.
ಎಣ್ಣೆ ಕಾದ ನಂತರ ಕಲೆಸಿದ ಮಿಶ್ರಣವನ್ನು ಕೈನಲ್ಲಿ ತೆಗೆದುಕೊಂಡು ಒಂದೊಂದಾಗಿ ಚಿಕ್ಕದಾಗಿ ಗುಂಡಗೆ ಎಣ್ಣೆಯಲ್ಲಿ  ಬಿಡಿ. ಬೋಂಡಾ ತರಹ ಹಾಕಿ, ಬಂಗಾರದ ಬಣ್ಣ ಬರುವವರೆಗೆ ಕರಿದು, ತೆಗೆಯಿರಿ, ಪೇಪರ್ ಟವಲ್ ಮೇಲೆ ಹಾಕಿ, ಸಾಸ್ ಅಥವ ಚಟ್ನಿ  ಜೊತೆ ಸರ್ವ್ ಮಾಡಿ.


Media Files:
http://indiankannadarecipes.blogspot.com




Bisi Bele Bhath Powder- ಬಿಸಿಬೇಳೆ ಭಾತ್ ಪುಡಿ:

Tue, 19 Jul 2011 07:26:00 +0000

ಬಿಸಿಬೇಳೆ ಭಾತ್ ಪುಡಿ:

ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು
ಧನಿಯ- ಎರಡು ಚಮಚ
ಮೆಂತ್ಯ -ಅರ್ಧ ಚಮಚ
ಜೀರಿಗೆ-ಒಂದು ಚಮಚ
ಗಸಗಸೆ-ಅರ್ಧ ಚಮಚ
ಏಲಕ್ಕಿ-೨
ಲವಂಗ-೪
ಚೆಕ್ಕೆ-ಒಂದಿಂಚಿನ ಚೂರು
ಮೆಣಸು - ಅರ್ಧ ಚಮಚ ಮತ್ತು
ಒಣಕೊಬ್ಬರಿ ಸ್ವಲ್ಪ
ಕಡ್ಲೆಬೇಳೆ ಮತ್ತು ಉದ್ದಿನಬೇಳೆ- ಕ್ರಮವಾಗಿ ಒಂದೊಂದು ಚಮಚ

ಪುಡಿ ತಯಾರಿಸುವ ಮುಂಚೆ ಗಮನಿಸಬೇಕಾದ ಅಂಶಗಳು:

ಕಡ್ಲೆಬೇಳೆ,ಉದ್ದಿನಬೇಳೆಯನ್ನು ಬೇಕೆನಿಸಿದರೆ ಹಾಕಿಕೊಳ್ಳಬಹುದು. ಇದನ್ನು ಹಾಕಿದರೆ ಅದರ ಪರಿಮಳ ಮತ್ತು ರುಚಿ ಎರಡು ಚೆನ್ನಾಗಿರುತ್ತದೆ. ಬೇಡವೆಂದರೆ ಬೇಳೆಗಳನ್ನು ಹಾಕದೇ ಸಹ ಪುಡಿ ತಯಾರಿಸಬಹುದು. ಬೇಳೆಗಳನ್ನು ಹಾಕುವುದರಿಂದ ಭಾತ್ ನೀರು ಹೊಡೆದಂತೆ ಇರುವುದಿಲ್ಲ, ಬೇಳೆಗಳನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ನಿಮಗೆ ಹೇಗೆ ಬೇಕೋ ಹಾಗೆ ತಯಾರಿಸಿಕೊಳ್ಳಿ.

ಒಣಮೆಣಸಿನ ಕಾಯಿಗಳನ್ನು ಖಾರಕ್ಕೆ ಮತ್ತು ಬಣ್ಣಕ್ಕೆ ಸರಿಹೊಂದುವಂತಹ ಕಾಯಿಗಳನ್ನು ಬಳಸಿ, ಪುಡಿಯ ಬಣ್ಣ ಮತ್ತು ಖಾರ ಎರಡು ಸಹ ನೀವು ಬಳಸುವ ಮೆಣಸಿನಕಾಯಿಗಳನ್ನು ಅವಲಂಬಿಸಿರುತ್ತದೆ.

ಈ ಪ್ರಮಾಣವೂ ಒಂದು ಬಾರಿ ಬಿಸಿಬೇಳೆಭಾತ್ ತಯಾರಿಸುವುದಕ್ಕೆ ಮಾತ್ರ ಕೊಟ್ಟಿರುವುದು. ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಪುಡಿ ಬೇಕೆನಿಸಿದರೆ ಅದಕ್ಕೆ ತಕ್ಕಂತೆ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ.

ತಯಾರಿಸುವ ವಿಧಾನ:

* ಪುಡಿ ಮಾಡಿಕೊಳ್ಳಲು ತಿಳಿಸಿರುವ ಸಾಮಗ್ರಿಗಳನ್ನು ಒಂದು ಚಮಚ ಎಣ್ಣೆ ಹಾಕಿ,ಒಂದೊಂದಾಗಿ ಹುರಿದುಕೊಂಡು,ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿ ಮಾಡಿಟ್ಟು ಕೊಳ್ಳಿ. ಬಿಸಿಬೇಳೆಭಾತ್ ಪುಡಿ ರೆಡಿಯಾಗುತ್ತದೆ.

* ಕೊಬ್ಬರಿಯನ್ನು ಸ್ವಲ್ಪ ಹುರಿದುಕೊಳ್ಳಿ, ಯಾವ ಸಾಮಗ್ರಿಗಳನ್ನು ಸೀದಿಸಬಾರದು.

* ಒಂದೊಂದಾಗಿ ಬೇಕಾದರೂ ಹುರಿದುಕೊಳ್ಳಬಹುದು ಅಥವಾ ಗೊತ್ತಿರುವವರೂ ಹದಕ್ಕೆ ಸರಿಯಾಗಿ ಎಲ್ಲವನ್ನು ಒಂದೊಂದಾಗಿ ಸೇರಿಸುತ್ತಾ ಹುರಿದುಕೊಳ್ಳಬಹುದು.

* ಬಿಸಿಬೇಳೆಭಾತಿನ ಪುಡಿಯನ್ನು ಮೊದಲೇ ಹೆಚ್ಚಾಗಿ ತಯಾರಿಸಿ,ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡಿದ್ದರೆ, ಯಾವಾಗ ಬೇಕೋ ಆಗ ಭಾತ್ ತಯಾರಿಸುವುದು ತುಂಬಾ ಸುಲಭ. ಆದರೂ ಪುಡಿಯನ್ನು ಬೇಕಾದಾಗ ತಕ್ಷಣವೇ ತಯಾರಿಸಿ, ಹಾಕಿದರೆ ಹೆಚ್ಚು ರುಚಿ ಮತ್ತು ಪರಿಮಳವೂ ಆಗಿರುತ್ತದೆ.

* ಒಣ ಮೆಣಸಿನಕಾಯಿಗಳನ್ನು ಖಾರಕ್ಕೆ ತಕ್ಕಂತೆ ಹಾಕಿ. ಇಲ್ಲವೆಂದರೆ ಕೆಂಪುಕಾರದ ಪುಡಿಯನ್ನಾದರೂ ಮೆಣಸಿನಕಾಯಿ ಬದಲಿಗೆ ಹಾಕಬಹುದು.

* ಧನಿಯಾ/ಕೊತ್ತುಂಬರಿ ಬೀಜಗಳನ್ನು ಹಾಕಿ ಪ್ರೆಶ್ ಆಗಿ ಹುರಿದು ಪುಡಿ ಮಾಡಿದರೆ ಅದರ ಸುವಾಸನೆಯು ಪುಡಿಯಲ್ಲಿ ಸೇರಿಕೊಳ್ಳುತ್ತದೆ. ಇದೆಲ್ಲಾ ಹುರಿದು ರಂಪ ಮಾಡುವವರಾರು ಎಂದು ಧನಿಯ ಪುಡಿಯನ್ನು ಬಳಸಬಹುದು. ಆದರೆ ಪುಡಿ ಘಮ ಘಮ ಎನ್ನುವುದಿಲ್ಲ, ಅದರ ಪರಿಮಳವೂ ಅಷ್ಟಾಗಿ ಇರುವುದಿಲ್ಲ. ಯಾವಾಗಲಾದರೊಮ್ಮೆ ತುಂಬಾ ಅರ್ಜೆಂಟ್ ಇದ್ದಾಗ ರೆಡಿಮೆಡ್ ಪುಡಿಗಳನ್ನು (ಮೆಣಸಿನಕಾಯಿ ಮತ್ತು ಕೊತ್ತುಂಬರಿಯ ಪುಡಿ) ಬಳಸಿಕೊಳ್ಳಿ.

* ಪುಡಿಯನ್ನು ಸ್ಟೋರ್ ಮಾಡಿರುವ ಡಬ್ಬಿಗೆ ಒದ್ದೆಯ ಚಮಚವನ್ನು ಹಾಕಬೇಡಿ. ಪ್ರಿಡ್ಜ್ ನಲ್ಲಿ ಇಟ್ಟರೆ ಇನ್ನೂ ಹೆಚ್ಚು ಫ್ರೆಶ್ ಆಗಿರುತ್ತದೆ.

* ಬಿಡುವಿದ್ದಾಗ ಪುಡಿ ತಯಾರಿಸಿಟ್ಟುಕೊಂಡರೆ, ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ನೀರು ಹೆಚ್ಚಾಗಿ ಹಾಕಿ ಬೇಯಿಸಿ,ಪುಡಿ ಹಾಕಿ, ಉಪ್ಪು,ಹುಳಿ ಮತ್ತು ಸ್ವಲ್ಪ ಬೆಲ್ಲ ಹಾಗೂ ಒಗ್ಗರಣೆ ಹಾಕಿ,ಬೇಗ ಬಿಸಿಬೇಳೆಭಾತ್ ತಯಾರಿಸಬಹುದು.


Media Files:
http://indiankannadarecipes.blogspot.com




Beans Palya - ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

Wed, 20 Apr 2011 07:08:00 +0000

ಹುರುಳಿಕಾಯಿ /ಬೀನ್ಸ್ ನಲ್ಲಿ ಬಲಿತಿರುವ ಕಾಯಿ ತೆಗೆದುಕೊಂಡರೆ ಅದರಲ್ಲಿ ನಾರು ಹೆಚ್ಚಾಗಿರುತ್ತದೆ,ಅದು ಚೆನ್ನಾಗಿರುವುದಿಲ್ಲ. ಆದ್ದರಿಂದ ನೋಡಿ ಎಳೆಯ ಮತ್ತು ಹಸಿರಾಗಿರುವ ಕಾಯಿಯನ್ನು ತೆಗೆದುಕೊಳ್ಳಿ. ಹುರುಳಿಕಾಯಿಯಲ್ಲಿ ನಾರಿನ ಅಂಶವಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಲ್ಯ,ಸಾರು,ಸಾಗು ಯಾವುದಕ್ಕೆ ಬೇಕಾದರೂ ಇದನ್ನು ಬಳಸಬಹುದು. ಇದು ಎಲ್ಲದಕ್ಕು ಹೊಂದಿಕೊಳ್ಳುತ್ತದೆ. ಇಲ್ಲಿ ಬರೆದಿರುವ ಸಿಂಪಲ್ ಪಲ್ಯದಲ್ಲಿಯೇ ತುಂಬಾ ರುಚಿ ಜಾಸ್ತಿಯಾಗಿರುತ್ತದೆ. ಈ ಪಲ್ಯ ಸೈಡ್ ಡಿಶ್ ಅಥವಾ ಚಪಾತಿ,ಪೂರಿ,ಪರೋಟ ಮತ್ತು ಬ್ರೆಡ್ ಜೊತೆ ಸಹ ಚೆನ್ನಾಗಿರುತ್ತದೆ. ಮಕ್ಕಳಿಗೂ ಇಷ್ಟವಾಗುವ ಪಲ್ಯ. ಎಲ್ಲರಿಗೂ ತಿಳಿದಿರುವಂತೆ ಹುರುಳಿಕಾಯಿ ಪಲ್ಯದ ಪಫ್ ನಲ್ಲಿ ಅಂತೂ ಹೆಚ್ಚಿನ ರುಚಿ ಇರುತ್ತದೆ. ಪಫ್ ತಯಾರಿಸುವಾಗ ಆಲೂಗೆಡ್ಡೆ ಪಲ್ಯದ ಬದಲು, ಈ ಪಲ್ಯಕ್ಕೆ ಸ್ವಲ್ಪ ಮಸಾಲೆ ಹಾಕಿ ಬಳಸಬಹುದು.

ಹುರುಳಿಕಾಯಿ ಪಲ್ಯ / ಬೀನ್ಸ್ ಪಲ್ಯ:

ಬೇಕಾಗುವ ಪದಾರ್ಥಗಳು;

ಹುರುಳಿಕಾಯಿ - ಅರ್ಧ ಕಿಲೋ
ಈರುಳ್ಳಿ - ಒಂದು, ಸಣ್ಣಗೆ ಹೆಚ್ಚಿ,
ಹಸಿಮೆಣಸಿನಕಾಯಿ -ರುಚಿಗೆ, ಉದ್ದಕ್ಕೆ ಸೀಳಿಕೊಂಡರೆ ಉತ್ತಮ
ಎಣ್ಣೆ - ಅವಶ್ಯಕತೆ ಇದ್ದಷ್ಟು
ಸಾಸಿವೆ ಸ್ವಲ್ಪ
ಕರಿಬೇವು- ಒಂದು ಗರಿ, ಆಗೇ ಕೈಯಲ್ಲಿ ಮುರಿದುಕೊಳ್ಳಿ.
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದು ಚಮಚ
ಅರಿಶಿನ ಚಿಟಿಕೆ
ಉಪ್ಪು ರುಚಿಗೆ
ಕಾಯಿತುರಿ ಸ್ವಲ್ಪ ಜಾಸ್ತಿ ಇರಲಿ
ಕೊತ್ತುಂಬರಿಸೊಪ್ಪು ಸಣ್ಣಗೆ ಹೆಚ್ಚಿದ್ದು.

ವಿಧಾನ:

ಮೊದಲು ಹುರುಳಿಕಾಯಿಯನ್ನು ಚೆನ್ನಾಗಿ ತೊಳೆದು, ನಾರು ತೆಗೆದು ಬಿಡಿಸಿಕೊಂಡು, ಕಾಯಿಯನ್ನು ಸಣ್ಣಗೆ ಒಂದೇ ಸಮನಾಗಿ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ, ಕಾದ ಬಳಿಕ, ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಬಾಡಿಸಿ, ಕರಿಬೇವು, ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು, ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹೆಚ್ಚಿದ ಹುರುಳಿಕಾಯಿಯನ್ನು ಸೇರಿಸಿ, ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ಸ್ವಲ್ಪ ನೀರು ಚಿಮುಕಿಸಿ,ಮುಚ್ಚಿಟ್ಟು, ಕಾಯಿ ಬೇಯುವವರೆಗು ಬೇಯಿಸಿ. ಇದು ಸ್ವಲ್ಪ ಬೇಗ ಬೇಯುತ್ತದೆ. ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಎಳೆಯದಾಗಿದ್ದರೆ ಬೇಗ ಬೇಯುವುದು, ಬಲಿತಿದ್ದರೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಚಪಾತಿ ಮಧ್ಯೆ ಸ್ಯಾಂಡ್ ವಿಚ್ ತರಹ ರೋಲ್ ಮಾಡಿಕೊಂಡು ತಿನ್ನಲು ಕೂಡ ಚೆನ್ನಾಗಿರುತ್ತದೆ. ಎರಡು ಬ್ರೆಡ್ ಗಳ ಮಧ್ಯೆಯೂ ಪಲ್ಯ ಇಟ್ಟು ತಿನ್ನಬಹುದು, ಪಫ್ ತರಹ ರುಚಿಯಾಗಿರುತ್ತದೆ.

* ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಬೇಯಿಸುವುದು ಕಷ್ಟ ಮತ್ತು ಬೇಯಲು ಬಹಳ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ.


Media Files:
http://indiankannadarecipes.blogspot.com




Rasam Powder - ರಸಂ ಪುಡಿ / ರಸಂ ಪೌಡರ್

Mon, 21 Mar 2011 07:14:00 +0000

ರಸಂ ಪುಡಿ / ರಸಂ ಪೌಡರ್  

ಬೇಕಾಗುವ ಪದಾರ್ಥಗಳು:


ಒಣ ಮೆಣಸಿನ ಕಾಯಿ - ಒಂದು ಬಟ್ಟಲು
ಧನಿಯಾ ಬೀಜ - ಅರ್ಧ ಬಟ್ಟಲು
ಜೀರಿಗೆ - ಒಂದು ದೊಡ್ಡ ಚಮಚ
ಮೆಣಸು - ಒಂದು ದೊಡ್ಡ ಚಮಚ
ಮೆಂತ್ಯ - ದೊಡ್ಡ ಚಮಚದಲ್ಲಿ ಅರ್ಧ
ಕರಿಬೇವು - ಒಂದು ಬಟ್ಟಲು
ಅರಿಶಿಣ - ಒಂದು ಚಿಕ್ಕ ಚಮಚ
ಇಂಗು - ಒಂದು ಚಿಕ್ಕ ಚಮಚ
ಎಣ್ಣೆ - ಅರ್ಧ ಚಮಚ

ತಯಾರಿಸುವ ವಿಧಾನ:


ಬಾಣಲೆಗೆ ಮೆಣಸಿನಕಾಯಿ, ಧನಿಯಾ, ಜೀರಿಗೆ,ಮೆಂತ್ಯ,ಮೆಣಸು ಮತ್ತು ಕರಿಬೇವು ಹಾಕಿ ಕಡಿಮೆ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಹುರಿಯಿರಿ, ಹೀಗೆ ಹುರಿದ ನಂತರ ಮೆಣಸಿನಕಾಯಿಯನ್ನು ಮುರಿದು ಪರೀಕ್ಷೆ ಮಾಡಿ, ಅದು ಗರಿಗರಿಯಾಗಿದ್ದು ಅದುಮಿದ ತಕ್ಷಣ ಮುರಿದುಕೊಂಡರೆ ಹುರಿದಿದ್ದು ಸಾಕು, ನಂತರ ಅದಕ್ಕೆ ಅರಿಶಿಣ/ಅರಿಶಿನ , ಇಂಗು ಮತ್ತು ಎಣ್ಣೆ ಹಾಕಿ, ಸ್ಟೌವ್ ಆರಿಸಿ, ಈಗ ಎಲ್ಲವನ್ನು ಚೆನ್ನಾಗಿ ಬೆರೆಸಿ. ಸ್ವಲ್ಪ ಹೊತ್ತು ಹಾಗೆಯೇ ತಣ್ಣಗಾಗಲು ಬಿಡಿ.  ಬಾಣಲೆಯಲ್ಲಿರುವ ಸಾಮಗ್ರಿಗಳು ತಣ್ಣಗಾದ ಬಳಿಕ, ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.ಘಮ ಘಮ ರಸಂ ಪುಡಿ ಸಿದ್ಧವಾಗುತ್ತದೆ.
ನಂತರ ಗಾಳಿಯಾಡದ ಡಬ್ಬಿಯಲ್ಲಿ ತುಂಬಿಸಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಒಂದು ದಿನ ಶ್ರಮವಹಿಸಿ ಪುಡಿಯನ್ನು ತಯಾರಿಸಿಟ್ಟುಕೊಂಡರೆ, ಬೇಕಾದಾಗ ರುಚಿಯಾದ ರಸಂ ಅನ್ನು ತಯಾರಿಸಬಹುದು.

# ಗಮನಿಸಬೇಕಾದ ಅಂಶಗಳು:

*  ಒಣ ಮೆಣಸಿನಕಾಯಿಯನ್ನು ಅರ್ಧಕ್ಕೆ ಮುರಿದು ಬಟ್ಟಲಿಗೆ ಹಾಕಿ, ಒಂದು ಪ್ರಮಾಣದಲ್ಲಿ ಮೆಣಸಿನಕಾಯಿ ತೆಗೆದುಕೊಂಡರೆ, ಅದರ ಅರ್ಧದಷ್ಟು ಪ್ರಮಾಣದಲ್ಲಿ ಧನಿಯಾ ಬೀಜಗಳನ್ನು ತೆಗೆದುಕೊಳ್ಳಿ.

*  2:1 ಪ್ರಮಾಣದಲ್ಲಿ ಮೆಣಸಿನಕಾಯಿ ಮತ್ತು ಧನಿಯಾ ತೆಗೆದುಕೊಳ್ಳಿ.

*  ಖಾರವು ಮೆಣಸಿನಕಾಯಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ ಒಂದೊಂದು ಮೆಣಸಿನಕಾಯಿ ಒಂದೊಂದು ರೀತಿಯ   ಕಾರವನ್ನು ಹೊಂದಿರುತ್ತದೆ. ಬಣ್ಣ ಸಹ. ಆಗಾಗಿ ನಿಮಗೆ ಸರಿ ಎನಿಸಿದ ಮೆಣಸಿನಕಾಯಿಗಳನ್ನು ಹಾಕಿ.

ಬಣ್ಣ ಕೊಡುವ ಮೆಣಸಿನಕಾಯಿ, ಕಾರ ಕೊಡುವ ಮೆಣಸಿನಕಾಯಿ,ಬ್ಯಾಡಗಿ ಮೆಣಸಿನಕಾಯಿ ಹೀಗೆ ಮೆಣಸಿನಕಾಯಿಯಲ್ಲಿ ನಾನಾ ವಿಧವಿರುವುದರಿಂದ ನಿಮಗೆ ಬೇಕಾದ ಮೆಣಸಿನಕಾಯಿ ಬಳಸಿ. ಇಲ್ಲವೆಂದರೆ ಎರಡು ಅರ್ಧ-ಅರ್ಧ ಹಾಕಬಹುದು.

* ಕರಿಬೇವು ಸಹ ಇಲ್ಲಿ ಮುಖ್ಯವಾಗಿರುತ್ತದೆ.

*  ಪದಾರ್ಥಗಳನ್ನು ಹುರಿಯುವಾಗ ಸರಿಯಾದ ಹದದಲ್ಲಿ ಹುರಿಯಿರಿ, ಸೀದಿಸಬೇಡಿ. ತಣ್ಣಗಾದ ನಂತರವೇ ಮಿಕ್ಸಿಗೆ ಹಾಕಬೇಕು.



Media Files:
http://indiankannadarecipes.blogspot.com




Tomato Chitranna Gojju:ಟೊಮೋಟೊ ಚಿತ್ರಾನ್ನ ಗೊಜ್ಜು:

Thu, 10 Mar 2011 21:45:00 +0000





ಟೊಮೋಟೊ ಚಿತ್ರಾನ್ನ ಗೊಜ್ಜು:

ಬೇಕಾಗುವ ಸಾಮಗ್ರಿಗಳು:


ಟೊಮೋಟೊ- ನಾಲ್ಕು ಮಧ್ಯಮ ಗಾತ್ರದ್ದು
ಈರುಳ್ಳಿ - ಒಂದೆರಡು
ಹಸಿಮೆಣಸಿನಕಾಯಿ - ಎರಡು
ಎಣ್ಣೆ - ಒಗ್ಗರಣೆಗೆ
ಕಡ್ಲೆಬೇಳೆ - ಒಂದು ಚಮಚ
ಉದ್ದಿನ ಬೇಳೆ - ಒಂದು ಚಮಚ
ಸಾಸಿವೆ - ಕಾಲು ಚಮಚ
ಜೀರಿಗೆ - ಕಾಲು ಚಮಚ
ಅರಿಶಿಣ - ಚಿಟಿಕೆ
ಕರಿಬೇವು ಸ್ವಲ್ಪ
ಕೊತ್ತುಂಬರಿ ಸೊಪ್ಪು
ಅಚ್ಚ ಕಾರದ ಪುಡಿ ಮತ್ತು ಉಪ್ಪು - ರುಚಿಗೆ ತಕ್ಕಷ್ಟು


ತಯಾರಿಸುವ ವಿಧಾನ:

ಟೊಮೋಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಕೊಳ್ಳಿ. ಕೊತ್ತುಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ.
ಒಗ್ಗರಣೆಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಕ್ರಮವಾಗಿ ಹಾಕಿ. ನಂತರ ಈರುಳ್ಳಿ,ಕರಿಬೇವು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಈರುಳ್ಳಿ ಬೇಯುವವರೆಗೂ ತಿರುಗಿಸಿ.ಹೆಚ್ಚಿದ ಟೊಮೆಟೊ ಅನ್ನು ಹಾಕಿ,ಬೆರೆಸಿ. ನಾಲ್ಕರಿಂದ ಐದು ನಿಮಿಷ ಬೇಯಿಸಿ. ನಂತರ ಅದಕ್ಕೆ ಅರಿಶಿಣ, ಕಾರದಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ, ಒಂದೆರಡು ನಿಮಿಷದ ನಂತರ ಒಲೆಯಿಂದ ಇಳಿಸಿ. ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.
ಈ ಒಗ್ಗರಣೆ ಗೊಜ್ಜನ್ನು ಅನ್ನಕ್ಕೆ ಕಲಸಿ, ಚೆನ್ನಾಗಿ ಬೆರೆಸಿ, ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸಹ ಬೆರೆಸಿದರೆ. ಟೊಮೋಟೊ ಚಿತ್ರಾನ್ನ ತಯಾರಾಗುತ್ತದೆ.


Media Files:
http://indiankannadarecipes.blogspot.com




ಕರದಂಟು / ಅಂಟಿನ ಉಂಡೆ : Karadantu / Antunde

Wed, 09 Mar 2011 09:09:00 +0000

ಕರದಂಟು ಅಥವಾ ಅಂಟಿನ ಉಂಡೆ ಇದು ನಮ್ಮ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ತುಂಬಾ ಪ್ರಸಿದ್ಧಿಯಾದ ಸಿಹಿ ತಿನಿಸು. ಬೆಳಗಾಂ ಎಂದರೆ ಮೊದಲು ನೆನಪಿಗೆ ಬರುವುದೆ ಕರದಂಟು. ಇಲ್ಲೆಲ್ಲ ನಾವು ಅವರ ತರಹ ರೆಸಿಪಿಯಲ್ಲೇ ತಯಾರಿಸಿದರು ಸಹ, ಅವರು ತಯಾರಿಸುವ ಕರದಂಟಿನ ರುಚಿಯೇ ಅದ್ಭುತ. ಅದಕ್ಕಾಗಿಯೇ ಅಲ್ಲವೆ ಬೆಳಗಾವಿಗೂ ಕರದಂಟಿಗೂ ನೆಂಟು. ಅಂಟುಂಡೆ ಎಂದು ಕೆಲವರು ಕರೆಯುತ್ತಾರೆ. ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರದಲ್ಲಿ ಉಂಡೆ ಕಟ್ಟುವುದರಿಂದ ಕರದಂಟು ಎಂತಲೂ ಅಥವಾ ಅಂಟನ್ನು ಕರಿದು ಅರ್ಥಾತ್ ಹುರಿದು ತಯಾರಿಸುವುದರಿಂದಲೂ ಈ ಹೆಸರು ಬಂದಿರಬಹುದೇನೋ ಎಂದು ನನ್ನ ಅನಿಸಿಕೆ. ಯಾವುದರಿಂದಲಾದರೂ ಹೆಸರು ಬರಲಿ ಈ ಉತ್ತಮವಾದ ಉಂಡೆಯಂತೂ ತಿನ್ನಲು ಬಲು ರುಚಿ ಮತ್ತು ನಮ್ಮ ಆರೋಗ್ಯಕ್ಕೂ ಸಹ ಅಷ್ಟೇ ಉತ್ತಮ. ಇದನ್ನು ಋತುಮತಿಯಾದವರಿಗೆ ಮತ್ತು ಬಾಣಂತಿಯರಿಗೆ ತಿನ್ನಲು ನೀಡಿದರೆ ತುಂಬಾ ಒಳ್ಳೆಯದು. ಈ ಕರದಂಟು ಉಂಡೆಯನ್ನು ಅವರು ತಿನ್ನುವುದರಿಂದ ಅವರಿಗೆ ಆ ಸಮಯದಲ್ಲಿ ಅವರಿಗೆ ಬೇಕಾದ ಶಕ್ತಿ ಮತ್ತು ಎಲ್ಲಾ ಪೌಷ್ಠಿಕಾಂಶಗಳು ದೊರೆಯುತ್ತವೆ. ಎಲ್ಲಾ ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಇದು ಒಂದು ರೀತಿ ಆರೋಗ್ಯಕರವಾದ ಉಂಡೆ. ಕರದಂಟು / ಅಂಟಿನ ಉಂಡೆ : ಬೇಕಾಗುವ ಸಾಮಗ್ರಿಗಳು:ಖರ್ಜೂರ - ಒಂದು ಬಟ್ಟಲುಬಾದಾಮಿ - ಒಂದು ಬಟ್ಟಲುಗೋಡಂಬಿ- ಒಂದು ಬಟ್ಟಲುದ್ರಾಕ್ಷಿ - ಒಂದು ಬಟ್ಟಲುಒಣ ಕೊಬ್ಬರಿ ತುರಿ - ಒಂದು ಬಟ್ಟಲುಗಸಗಸೆ - ಎರಡು ದೊಡ್ಡ ಚಮಚಅಂಟು - ಕಾಲು ಬಟ್ಟಲು / ಸ್ವಲ್ಪಬೆಲ್ಲ - ರುಚಿಗೆ ತಕ್ಕಂತೆತುಪ್ಪ - ಸ್ವಲ್ಪತಯಾರಿಸುವ ವಿಧಾನ:ಖರ್ಜೂರ,ಬಾದಾಮಿ ಮತ್ತು ಗೋಡಂಬಿಯನ್ನು ಚೂರು ಮಾಡಿಟ್ಟುಕೊಳ್ಳಿ. ಅಂಟನ್ನು ಸಹ ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಪುಡಿ ಮಾಡಿ, ಮೊದಲು ಇಷ್ಟನ್ನು ತಯಾರಿಸಿಟ್ಟು ಕೊಂಡರೆ ಉಂಡೆ ತಯಾರಿಸುವಾಗ ಸುಲಭವಾಗುತ್ತದೆ. ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾ[...]


Media Files:
http://indiankannadarecipes.blogspot.com




ಕ್ಯಾರೆಟ್-ಎಲೆಕೋಸು ಸಲಾಡ್: Carrot-Cabbage Salad

Mon, 07 Mar 2011 06:27:00 +0000

ಕ್ಯಾರೆಟ್-ಎಲೆಕೋಸು ಸಲಾಡ್:

ಬೇಕಾಗುವ ಸಾಮಗ್ರಿಗಳು:

ಕ್ಯಾರೆಟ್ ತುರಿ - ಒಂದು ಬಟ್ಟಲು
ಎಲೆಕೋಸು ತುರಿ - ಒಂದು ಬಟ್ಟಲು
ಉಪ್ಪು ಮತ್ತು ಕರಿ ಮೆಣಸಿನ ಪುಡಿ - ರುಚಿಗೆ ತಕ್ಕಂತೆ
ಮಯೊನೈಸ್ (Mayonnaise) - ಎರಡು ದೊಡ್ಡ ಚಮಚ
ಕೊತ್ತುಂಬರಿ ಸೊಪ್ಪು ಸ್ವಲ್ಪ



ತಯಾರಿಸುವ ವಿಧಾನ:

ಕ್ಯಾರೆಟ್ ಮತ್ತು ಎಲೆಕೋಸು ತುರಿಯನ್ನು ಬೆರೆಸಿ, ಅದಕ್ಕೆ ಮಯೊನೈಸ್,ಉಪ್ಪು ಮತ್ತು ಮೆಣಸಿನಪುಡಿಯನ್ನು ಸೇರಿಸಿ, ಅದು ಎಲ್ಲಾ ಕಡೆ ಸರಿಯಾಗಿ ಬೆರೆತುಕೊಳ್ಳುವಂತೆ ಚೆನ್ನಾಗಿ ಬೆರೆಸಿ, ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ.
ತರಕಾರಿ ಶುಚಿಗೊಳಿಸಿ ತುರಿದಿಟ್ಟುಕೊಂಡಿದ್ದರೆ ತಯಾರಿಸಲು ತುಂಬಾ ಸರಳವಿದು. ಪಾರ್ಟಿಗಳಿಗೂ ಒಪ್ಪುವ ಸಲಾಡ್.

*  ತುರಿಯನ್ನು ಮತ್ತು ಮಯೊನೈಸ್ ಅನ್ನು ಮೊದಲು ಬೆರೆಸಿಕೊಂಡು, ಸಲಾಡ್ ಉಪಯೋಗಿಸುವಾಗ ಉಪ್ಪು ಮತ್ತು ಪೆಪ್ಪರ್ ಸೇರಿಸಬಹುದು.
ತಿನ್ನುವಾಗ ಮಾತ್ರ ಉಪ್ಪು ಬೆರೆಸಿ, ಮೊದಲೇ ಬೆರೆಸಿದರೆ ಸಲಾಡ್ ನೀರು ಬಿಡುತ್ತದೆ. ಆಗ ರುಚಿ ಚೆನ್ನಾಗಿರುವುದಿಲ್ಲ.
*  ಬೆರೆಸಿದ ತಕ್ಷಣ ತಿನ್ನುವುದರಿಂದ ರುಚಿ ತುಂಬಾ ಚೆನ್ನಾಗಿರುತ್ತದೆ. ಐದು-ಹತ್ತು ನಿಮಿಷಗಳು ಪರವಾಗಿಲ್ಲ.
*  ಹಸಿಯಾಗಿ ತರಕಾರಿ ತಿನ್ನದಿರುವ ಮಕ್ಕಳಿಗೆ ಇದನ್ನು ತಯಾರಿಸಿಕೊಟ್ಟರೆ ಬೇಡಾ ಎನ್ನದೆ ಇಷ್ಟಪಟ್ಟು ತಿನ್ನುತ್ತಾರೆ ಕೆಲವು ಮಕ್ಕಳು.
*  ಪರಿಮಳಕ್ಕಾಗಿ ಬೇಕಾದರೆ ಒಂದೇಒಂದು ಹಸಿಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿ ಹಾಕಬಹುದು.
ಕ್ಯಾರೆಟ್ ಅನ್ನು ಹಸಿಯಾಗಿ ತಿನ್ನುವುದರಿಂದ ಕಣ್ಣಿಗೆ ಬಹಳ ಒಳ್ಳೆಯದೆಂದು ಎಲ್ಲರಿಗು ತಿಳಿದಿರುವ ವಿಷಯ.
*  ಎಲೆಕೋಸು ಫ಼ೈಬರ್ ಹೊಂದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.


Media Files:
http://indiankannadarecipes.blogspot.com




Banana/Balekaayi bajji -ಬಾಳೆಕಾಯಿ ಬಜ್ಜಿ:

Thu, 03 Feb 2011 08:44:00 +0000


ಬಾಳೆಕಾಯಿ ಬಜ್ಜಿ:

ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ
ಕಡ್ಲೆಹಿಟ್ಟು - ಒಂದು ಬಟ್ಟಲು
ಅಕ್ಕಿಹಿಟ್ಟು - ಎರಡು ಚಮಚ
ಅಚ್ಚಖಾರದ ಪುಡಿ
ಉಪ್ಪು
ಓಮಕಾಳು
ಕಾದ ಎಣ್ಣೆ - ಒಂದು ಚಮಚ
ಚಿಟಿಕೆ ಸೋಡ
ಕಲೆಸಲು ಬೇಕಾಗುವಷ್ಟು ನೀರು
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

*ಬಾಳೆಕಾಯಿ ಸಿಪ್ಪೆ ತೆಗೆಯಿರಿ,ಬಾಳೆಕಾಯಿ ಸಿಪ್ಪೆ ತೆಗೆದಾಗ ಅಂಟಾಗುತ್ತದೆ. ಅದಕ್ಕಾಗಿ ಅದನ್ನು ತೆಳುವಾಗಿ ಹೆಚ್ಚಿಕೊಂಡ ತಕ್ಷಣ ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿಡಿ. ಇಲ್ಲ ಅಂದರೆ ಕಾಯಿ ಬೇಗ ಕಪ್ಪಾಗುತ್ತದೆ. ಉಪ್ಪು ಜೊತೆ ವಿನಿಗರ್ ಕೂಡ ಬೆರೆಸಿದರೆ ಇನ್ನೂ ಒಳ್ಳೆಯದು. ಬಾಳೆಕಾಯಿಯ ಸ್ಲೈಸ್ ಕಪ್ಪು ಮತ್ತು ಅಂಟು-ಅಂಟು ಆಗದಂತೆ ಚೆನ್ನಾಗಿರುತ್ತದೆ.
ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಮಕಾಳು,ಉಪ್ಪು, ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಕಾದಿರುವ ಎಣ್ಣೆ ಹಾಕಿ, ಜೊತೆಯಲ್ಲಿ ನೀರು ಹಾಕಿ, ಕಲೆಸಿಕೊಳ್ಳಿ, ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ, ಹೆಚ್ಚಿರುವ ಬಾಳೆಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ, ಎರಡು ಬದಿಯೂ ಚೆನ್ನಾಗಿ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಬಾಳೆಕಾಯಿ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಬೇಕಾದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು. ಕಾಯಿ ಚಟ್ನಿ ತುಂಬಾ ರುಚಿ.


Media Files:
http://indiankannadarecipes.blogspot.com




Horse Gram Sprouts Bassaru-ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಪಲ್ಯ:

Sat, 22 Jan 2011 14:53:00 +0000

ಮೊಳಕೆ ಹುರುಳಿಕಾಳು-ದಂಟುಸೊಪ್ಪಿನ ಬಸ್ಸಾರು ಮತ್ತು ಸೊಪ್ಪಿನ ಪಲ್ಯ: ಸಾರಿಗೆ ಬೇಕಾಗುವ ಸಾಮಾಗ್ರಿಗಳು: ಮೊಳಕೆ ಹುರುಳಿಕಾಳು - ಒಂದು ಬಟ್ಟಲು ಹಸಿರು / ಕೆಂಪು ದಂಟಿನಸೊಪ್ಪು ಈರುಳ್ಳಿ ಒಂದು ಬೆಳ್ಳುಳ್ಳಿ ಜೀರಿಗೆ ಒಂದು ದೊಡ್ಡ ಚಮಚ ಮೆಣಸು ಏಳೆಂಟು ಕಾಳು ಅರಿಶಿಣ ಹುಣಸೆಹಣ್ಣು ಅಥವಾ ಹುಣಸೆರಸ ಅಚ್ಚಖಾರದ ಪುಡಿ ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ ಕೊತ್ತುಂಬರಿಸೊಪ್ಪು ಕರಿಬೇವಿನ ಸೊಪ್ಪು ಹಸಿಮೆಣಸಿನಕಾಯಿಉಪ್ಪು ಎಣ್ಣೆ ತಯಾರಿಸುವವಿಧಾನ: ಮೊದಲು ಸೊಪ್ಪನ್ನು ಚೆನ್ನಾಗಿ ಬಿಡಿಸಿಕೊಂಡು, ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.ಕುಕ್ಕರ್ ನಲ್ಲಿ ನೀರು ಹಾಕಿ, ಅದಕ್ಕೆ ಮೊಳಕೆ ಹುರುಳಿಕಾಳುಗಳನ್ನು ಹಾಕಿ ಚೆನ್ನಾಗಿ ಬೇಯಿಸಿ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಕಾಳು ಬೇಯಲು ಬಿಡಿ.ಹುರುಳೀಕಾಳು ಬೇಯುವುದು ನಿಧಾನ. ಅದಕ್ಕೆ ಅದನ್ನು ಒಂದು ವಿಷ್ಹಲ್ ಬರುವಷ್ಟು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ, ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಸೊಪ್ಪನ್ನು ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ಸೊಪ್ಪು ಬೇಯುವವರೆಗೂ ಬೇಯಿಸಿ, ಹುರುಳಿಕಾಳು ಕರಗದಂತೆ ಬೇಯಿಸಿಕೊಳ್ಳಿ. ನಂತರ ಹುರುಳಿಕಾಳು ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು,ಬೇಯಿಸಿದ ಸೊಪ್ಪು-ಕಾಳಿನ ಕಟ್ಟು ಮತ್ತು ಸೊಪ್ಪುಕಾಳನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ. ಸಾರಿಗೆ ರುಬ್ಬಿಕೊಳ್ಳಲು: ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆ ಒಂದೆರಡು ಚಮಚ ಬೇಯಿಸಿದ ಕಾಳುಮತ್ತು ಸೊಪ್ಪಿನ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಸಾರಿನ ಒಗ್ಗರಣೆಗೆ- ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ [...]



Snakegourd chutney - ಪಡುವಲಕಾಯಿ ತಿರುಳಿನ ಚಟ್ನಿ:

Wed, 12 Jan 2011 15:16:00 +0000

ಕೆಲವು ತರಕಾರಿಗಳ ಕಾಯಿಯ ತಿರುಳನ್ನು ಸಹ ಎಸೆಯದೆ ನಾವು ಅದನ್ನು ಅಡಿಗೆಯಲ್ಲಿ ಉಪಯೋಗಿಸಬಹುದು. ಆ ತಿರುಳಿನಲ್ಲು ಸಹ ಒಳ್ಳೆಯ ಅಂಶಗಳಿರುತ್ತವೆ. ಕೆಲವು ತರಕಾರಿಗಳ ಸಿಪ್ಪೆ, ತಿರುಳು ಮತ್ತು ಸೊಪ್ಪು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುತ್ತದೆ.  ಆಗಾಗಿ ಉಪಯೋಗಿಸಬಹುದಾದಂತ ತರಕಾರಿಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಪಡುವಲ ಕಾಯಿಯಲ್ಲಿ ಯಾವುದನ್ನು ಬಿಸಾಡುವಂತಿಲ್ಲ. ಪಡುವಲಕಾಯಿಯನ್ನು ದಿನನಿತ್ಯದ ಅಡಿಗೆಯಲ್ಲಿ ಬಳಸಿದರೆ ಬಿ.ಪಿ ಇರುವವರಿಗೆ ತುಂಬಾ ಉಪಯುಕ್ತವಾಗುತ್ತದೆ. ಅದರಲ್ಲಿ ತಿರುಳಿನಲ್ಲಿ ಚಟ್ನಿ. ಸಿಪ್ಪೆಯಲ್ಲಿ ಸಹ ಮತ್ತು ಒಳಗಿನ ಕಾಯಿಯಿಂದ ಹುಳಿ,ಸಾರು ಮತ್ತು ಪಲ್ಯವನ್ನು ತಯಾರಿಸುತ್ತೇವೆ. ಈಗ ಇಲ್ಲಿ ಪಡುವಲಕಾಯಿಯ ತಿರುಳಿನ ಚಟ್ನಿಯನ್ನು ತಯಾರಿಸೋಣ.ಪಡುವಲಕಾಯಿ ತಿರುಳಿನ ಚಟ್ನಿ:ಪಡುವಲಕಾಯಿ ತಿರುಳುಸ್ವಲ್ಪ ಕಾಯಿತುರಿಹುಣಸೇಹಣ್ಣು ಚೂರುಹಸಿಮೆಣಸಿನಕಾಯಿಉದ್ದಿನಬೇಳೆ - ಒಂದು ಚಮಚಉಪ್ಪು ರುಚಿಗೆಒಗ್ಗರಣೆಗೆ;ಎಣ್ಣೆ, ಜೀರಿಗೆ,ಸಾಸಿವೆ,ಕರಿಬೇವುತಯಾರಿಸುವ ರೀತಿ:ಉದ್ದಿನಬೇಳೆಯನ್ನು ಸ್ವಲ್ಪ ಹುರಿದುಕೊಂಡು ಅದಕ್ಕೆ ತೆಂಗಿನತುರಿ,ಉಪ್ಪು,ಹುಣಸೇಹಣ್ಣು,ಹಸಿಮೆಣಸಿನಕಾಯಿ ಮತ್ತು ಉದ್ದಿನಕಾಳು ಹಾಕಿ ನುಣ್ಣಗೆ ರುಬ್ಬಿ.ಒಗ್ಗರಣೆಗೆ ಎಣ್ಣೆ ಹಾಕಿ ಕಾದಬಳಿಕ ಜೀರಿಗೆ, ಸಾಸಿವೆ ಮತ್ತು ಕರಿಬೇವು ಹಾಕಿ, ಈ ಒಗ್ಗರಣೆಯನ್ನು ರುಬ್ಬಿದ ಚಟ್ನಿಗೆ ಸೇರಿಸಿ, ಬೆರೆಸಿ. ಇದು ತುಂಬಾ ರುಚಿಯಾಗಿರುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು. [...]


Media Files:
http://indiankannadarecipes.blogspot.com




Moongdal Halwa - ಹೆಸರುಬೇಳೆ ಹಲ್ವ:

Wed, 12 Jan 2011 14:59:00 +0000

ಹೆಸರುಬೇಳೆ ಹಲ್ವ:ಹೆಸರುಬೇಳೆ - ಒಂದು ಕಪ್ಸಕ್ಕರೆ - ಒಂದು ಕಪ್ಕೋವಾ - ಕಾಲು ಕಪ್ತುಪ್ಪ - ಕಾಲು ಕಪ್ಏಲಕ್ಕಿ ಪುಡಿ ಸ್ವಲ್ಪಗೋಡಂಬಿ ಮತ್ತು ಬಾದಾಮಿತಯಾರಿಸುವ ರೀತಿ:ಮೊದಲಿಗೆ ಹೆಸರು ಬೇಳೆಯನ್ನು ಸ್ವಲ್ಪ ಅಂದರೆ ಹಸಿ ವಾಸನೆ ಹೋಗುವಂತೆ  ಹುರಿದುಕೊಳ್ಳಿ. ಹುರಿದ ಬೇಳೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.ಸಕ್ಕರೆ ಮತ್ತು ನೀರನ್ನು ಹಾಕಿ ಒಂದೆಳೆ ಪಾಕವನ್ನು ತಯಾರಿಸಿಕೊಂಡು ಅದಕ್ಕೆ ಹುರಿದಿಟ್ಟುಕೊಂಡಿರುವ ಹೆಸರುಬೇಳೆ ಪುಡಿಯನ್ನು ಹಾಕಿ ಮತ್ತು ಕೋವವನ್ನು ಸೇರಿಸಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಒಂದೆರಡು ಚಮಚ ತುಪ್ಪವನ್ನು ಸೇರಿಸಿ, ತಿರುಗಿಸುತ್ತಿರಿ, ಹಲ್ವ ಹದಕ್ಕೆ ಬಂದ ತಕ್ಷಣ ಇಳಿಸಿ, ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಬೆರೆಸಿ. ರುಚಿಯಾದ ಹೆಸರುಬೇಳೆ ಹಲ್ವ ತಯಾರಾಗುತ್ತದೆ. ಇದು ತಂಪು, ಬೇಸಿಗೆಗಾಲದಲ್ಲಿ ಒಳ್ಳೆಯದು.[...]


Media Files:
http://indiankannadarecipes.blogspot.com




ಡ್ರೈ ಫ್ರೂಟ್ಸ್ ಉಂಡೆ : Dry Fruits Ball/Unde

Tue, 04 Jan 2011 09:31:00 +0000

ಡ್ರೈ ಫ್ರೂಟ್ಸ್ ಉಂಡೆ :ಬೇಕಾಗುವ ಸಾಮಗ್ರಿಗಳು:ಗೋಡಂಬಿ- ಒಂದು ಬಟ್ಟಲುಬಾದಾಮಿ - ಒಂದು ಬಟ್ಟಲುದ್ರಾಕ್ಷಿ - ಒಂದು ಬಟ್ಟಲುಖರ್ಜೂರ - ಒಂದು ಬಟ್ಟಲುಒಣ ಕೊಬ್ಬರಿ ತುರಿ - ಒಂದು ಬಟ್ಟಲುಗಸಗಸೆ - ಎರಡು ದೊಡ್ಡ ಚಮಚಎಳ್ಳು - ಎರಡು ದೊಡ್ಡ ಚಮಚಬೆಲ್ಲ - ರುಚಿಗೆ ತಕ್ಕಂತೆತುಪ್ಪ - ಸ್ವಲ್ಪತಯಾರಿಸುವ ವಿಧಾನ:ಗೋಡಂಬಿ,ಬಾದಾಮಿ ಮತ್ತು ಖರ್ಜೂರವನ್ನು ಚೂರು ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿ.ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ ಹುರಿದು,ಆಮೇಲೆ ದ್ರಾಕ್ಷಿ ಹೀಗೆ ಹುರಿದುಕೊಂಡು ಅದನ್ನು ಬೇರೆ ಪಾತ್ರೆಗೆ ತೆಗೆಯಿರಿ, ಅದೇ ತುಪ್ಪದಲ್ಲಿ ಖರ್ಜೂರವನ್ನು ಹುರಿದು ತೆಗೆದಿಡಿ. ಒಣಕೊಬ್ಬರಿ ತುರಿ ಸಹ ಹುರಿದು ಬಾದಾಮಿ,ಗೋಡಂಬಿ ಹಾಕಿರುವ ಪಾತ್ರೆಗೆ ಎಲ್ಲಾ ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಎಳ್ಳು ಮತ್ತು ಗಸಗಸೆಯನ್ನು ಹುರಿದು ಸೇರಿಸಿ. ಎಲ್ಲ ಸಾಮಗ್ರಿಗಳನ್ನು ಹದವಾಗಿ, ಬಣ್ಣ ನೋಡಿಕೊಂಡು ಹುರಿಯಿರಿ, ತುಂಬಾ ಹುರಿಯದಿರಿ ಮತ್ತು ಸೀದಿಸಬೇಡಿ. ಎಲ್ಲವನ್ನು ಕೈ ಬಿಡದೇ ತಿರುಗಿಸುತ್ತಾ ಬೇರೆಬೇರೆಯಾಗಿ ಹುರಿದುಕೊಂಡ ನಂತರ ಬೆಲ್ಲದ ಪಾಕವನ್ನು ತಯಾರಿಸಬೇಕು.ಬೆಲ್ಲದ ಪಾಕ ಮತ್ತು ಉಂಡೆಯನ್ನು ತಯಾರಿಸುವ ವಿಧಾನ:ಪುಡಿ ಮಾಡಿದ ಬೆಲ್ಲವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಅದು ಕರಗಿ ಒಂದೆಳೆ ಪಾಕದ ಹದಕ್ಕೆ ಬಂದಾಗ ನೋಡಿ, ತಕ್ಷಣವೇ ಅದಕ್ಕೆ ಹುರಿದಿಟ್ಟುಕೊಂಡಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ. ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ತುಂಬಾ ಹೊತ್ತು ಸಹ ತಣ್ಣಗಾಗಲು ಬಿಡದಿರಿ. ಉಂಡೆ ತಯಾರಿಸಿದ ನಂತರ ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಮೂವತ್ತು- ನಲವತ್ತು ದಿನಗಳವರೆಗೆ ಕೆಡದಂತೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಇನ್ನು ಸುಮಾರು [...]


Media Files:
http://indiankannadarecipes.blogspot.com