Subscribe: ಮನೆಮದ್ದು ಮತ್ತು ಉಪಯೋಗಗಳು # HOME REMEDIES AND USEFUL TIPS
http://homeremediestip.blogspot.com/rss.xml
Added By: hsks Feedage Grade B rated
Language: Kannada
Tags:
Rate this Feed
Rate this feedRate this feedRate this feedRate this feedRate this feed
Rate this feed 1 starRate this feed 2 starRate this feed 3 starRate this feed 4 starRate this feed 5 star

Comments (0)

Feed Details and Statistics Feed Statistics
Preview: ಮನೆಮದ್ದು ಮತ್ತು ಉಪಯೋಗಗಳು # HOME REMEDIES AND USEFUL TIPS

HOME REMEDIES AND KITCHEN TIPS



Collection of Home remedies,care tips,useful tips and cooking/kitchen tips * "ಕನ್ನಡದ ಕಂಪಿನ ಸಿರಿಗಂಧ - ಕನ್ನಡದಲ್ಲಿ ಅಡಿಗೆ ಟಿಪ್ಸ್ ಮತ್ತು ಮನೆಮದ್ದು ಬ್ಲ



Last Build Date: Fri, 07 Oct 2016 22:06:52 +0000

 



Tulasi - ತುಳಸಿ:

Sat, 27 Aug 2011 08:40:00 +0000

ತುಳಸಿ:

* ತುಳಸಿ ಎಲೆಗಳನ್ನು ಪ್ರತಿದಿನ ಬೆಳಗ್ಗೆ ತಿನ್ನುವುದರಿಂದ ತುಂಬಾ ಒಳ್ಳೆಯದು.
* ತುಳಸಿ ರಸದೊಂದಿಗೆ ಜೇನುತುಪ್ಪ ಬೆರೆಸಿ ತಿನ್ನಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.
* ತುಳಸಿ ಎಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ದಮ್ಮು ನಿವಾರಣೆಯಾಗುತ್ತದೆ.
ಇದರಿಂದ ತುಂಬಾ ಉಪಯೋಗಗಳಿವೆ.



Vegetable Tips - ತರಕಾರಿ ಟಿಪ್ಸ್

Wed, 20 Apr 2011 07:28:00 +0000

ತರಕಾರಿ ಟಿಪ್ಸ್:




ತರಕಾರಿ ಕೊಳ್ಳಲು ಮತ್ತು ಅದನ್ನು ಸಂಗ್ರಹಿಸಲು ಹೆಚ್ಚು ಮಹತ್ವ ಕೊಡಬೇಕು. ಇಲ್ಲಿ ಕೆಲವು ಅಂಶಗಳನ್ನು ತಿಳಿಸಿರುವೆ. ಅನುಕೂಲವಾದರೆ ಸಂತೋಷ.
ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಬೇಯಿಸುವುದು ಕಷ್ಟ ಮತ್ತು ಬೇಯಲು ಬಹಳ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ, ಕೆಲವು ತರಕಾರಿಗಳು ಅಂಗಡಿಯಿಂದ ತಂದ ಎರಡು-ಮೂರು ದಿನಗಳ ಹಂತರದಲ್ಲಿ ಉಪಯೋಗಿಸಿ, ಕೆಲವು ಸುಮಾರು ದಿನ ತಾಜಾ ಆಗಿರುತ್ತದೆ, ಕೆಲವು ತಂದಾಗ ಎಷ್ಟೇ ಫ್ರೆಶ್ ಇದ್ದರೂ ಸಹ ಬೇಗ ಬಲಿಯುತ್ತವೆ ಮತ್ತು ಒಣಗಿದಂತಾಗುತ್ತದೆ. ಫ್ರಿಡ್ಜ್ ನಲ್ಲಿ ಇಟ್ಟರು ಸಹ ಕೆಲವೊಂದು ಬೇಗ ಹಾಳಾಗುತ್ತವೆ.

ತರಕಾರಿಗಳನ್ನು ಪೇಪರ್ ನಲ್ಲಿ ಸುತ್ತಿಟ್ಟು ಕವರ್ ನಲ್ಲಿ ಇಡಿ, ಕವರ್ ನಲ್ಲಿ ಇಟ್ಟಾಗ ನೀರಿನ ಅಂಶ ಹೀರಿಕೊಂಡು ಬಹಳ ದಿನ ತರಕಾರಿ ಇರುತ್ತದೆ, ಬೇಗ ಹಾಳಾಗುವುದಿಲ್ಲ. ಪ್ಲಾಸ್ಟಿಕ್ ಕವರ್ ಗಿಂತ, ಪೇಪರ್ ಕವರ್ ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ತರಕಾರಿ ಚೆನ್ನಾಗಿರುತ್ತದೆ.


Media Files:
http://adigerecipes.blogspot.com




Radish - ಮೂಲಂಗಿ ಉಪಯೋಗಗಳು:

Tue, 22 Mar 2011 05:34:00 +0000

ಮೂಲಂಗಿ:ಮೂಲಂಗಿಯಿಂದ ತುಂಬಾ ಉಪಯೋಗಗಳಿವೆ, ಇದನ್ನು ನಾನಾ ರೀತಿಯಾಗಿ ಆಹಾರದಲ್ಲಿ ಬಳಸಬಹುದು. ಬೇಳೆಯೊಂದಿಗೆ ಸೇರಿಸಿ ಸಾಂಬಾರ್ ತಯಾರಿಸಬಹುದು, ಚಟ್ನಿಯೊಂದಿಗೆ ಜಜ್ಜಿ ಸೇರಿಸಿವುದರಿಂದ ಮೂಲಂಗಿ ಚಟ್ನಿ ತಯಾರಿ ಆಗುತ್ತದೆ. ಚಪಾತಿ ಹಿಟ್ಟಿಗೆ ಸೇರಿಸಿ ಪರೋಟ ಮಾಡಬಹುದು. ಸಲಾಡ್ ತರಹ ಉಪಯೋಗಿಸಿ ಹಸಿಯಾಗಿ ತಿನ್ನಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉಪಯೋಗಗಳು ಹೆಚ್ಚು.- ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.- ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.- ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.- ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.- ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.- ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.- ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.- ದಿನನಿತ್ಯ ಸಲಾಡ್ ರೀತಿಯಲ್ಲಿ ಮೂಲಂಗಿಯನ್ನು ಸೇವಿಸಿ, ಇದರಿಂದ ತುಂಬಾ ಅನುಕೂಲಗಳಾಗುತ್ತವೆ. ಒಂದೇ ತರಹ ತಿನ್ನಲು ಬೇಸರ ಎನಿಸಿದರೆ, ಚಟ್ನಿಯೊಂದಿಗೆ ಬೆರೆಸಿ, ಮೂಲಂಗಿ ಚಟ್ನಿ  ಅಥವ ಮೂಲಂಗಿ ಪರೋಟ ತಯಾರಿಸಿ ತಿನ್ನಬಹುದು. ಮೂಲಂಗಿ ಪರೋಟ ಮತ್ತು ಚಟ್ನಿ ರೆಸಿಪಿಯನ್ನು ಅಡಿಗೆ ರೆಸಿಪಿಯಲ್ಲಿ ನೋಡಬಹುದು.[...]


Media Files:
http://adigerecipes.blogspot.com




Fennel Seeds - ಸೋಂಪು

Sat, 22 Jan 2011 14:33:00 +0000

ಸೋಂಪು ಕಾಳನ್ನು ಪ್ರತಿದಿನ ಊಟವಾದ ಬಳಿಕ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.ಊಟದ ನಂತರ ತಿನ್ನುವುದರಿಂದ ಬಾಯಲ್ಲಿನ ವಾಸನೆಯೂ ಕಮ್ಮಿಯಾಗುತ್ತದೆ.

ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದರ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ತೊಂದರೆಗಳು ನಿವಾರಣೆಗಳಾಗುತ್ತವೆ.

ಸೋಂಪು ಅನ್ನು ನೀರಿನಲ್ಲಿ ಕುದಿಸಿ, ಅದರ ಡಿಕಾಕ್ಷನ್ ತಯಾರಿಸಿ, ಅದನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆನೋವು ಮತ್ತು ಇತರೆ ತೊಂದರೆ ನಿವಾರಣೆ. ಪೀರಿಯಡ್ಸ್ ಕೂಡ ರೆಗ್ಯುಲರ್ ಆಗಿ ಇರುತ್ತದೆ.

ಇದು ಮಕ್ಕಳಿಗೂ ಒಳ್ಳೆಯದು. ಇದರಿಂದ ಅವರಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.


Media Files:
http://adigerecipes.blogspot.com




Cardamom - ಏಲಕ್ಕಿ

Tue, 30 Mar 2010 07:16:00 +0000


ಏಲಕ್ಕಿ:

ಏಲಕ್ಕಿಯೂ ಮಸಾಲೆ ಪದಾರ್ಥಗಳ ಜಾತಿಗೆ ಸೇರುತ್ತದೆ. ಇದನ್ನು ಮಸಾಲೆಗೆ ಉಪಯೋಗಿಸುತ್ತೇವೆ. ಇದನ್ನು ಅಡಿಗೆಗಳಿಗೆ ಬಳಸುವುದರಿಂದ ಅದರ ಘಮ ಘಮ ವಾಸನೆ ಅಡಿಗೆಗೆ ಬರುತ್ತದೆ.
ಏಲಕ್ಕಿಗೆ ಒಂದು ತರಹ ಮಹತ್ವವಿದೆ. ಎಲ್ಲಾ ಸಿಹಿಅಡಿಗೆಗಳಲ್ಲೂ ಇದನ್ನು ಉಪಯೋಗಿಸಿದಾಗಲೇ ಅಡುಗೆ ಸಂಪೂರ್ಣವಾದಂತೆ. ಏಲಕ್ಕಿ ಹಾಕದ ಸಿಹಿ ತಿಂಡಿಗಳು ಇಲ್ಲ. ಯಾವುದೇ ರೀತಿಯ ಸಿಹಿ ತಿನಿಸುಗಳಿಗೆ ಇದನ್ನು ಬಳಸುವುದರಿಂದ ಅದರದ್ದೇ ಆದ ಒಂದು ತರಹ ರುಚಿ ಮತ್ತು ಸುವಾಸನೆಯನ್ನು ಕೊಡುತ್ತದೆ.
ಏಲಕ್ಕಿಯನ್ನು ತಿನ್ನುವುದರಿಂದ ಅಜೀರ್ಣ ನಿವಾರಣೆಯಾನುತ್ತದೆ.
ಇದನ್ನು ತಲೆನೋವು ಬಂದಾಗ ತಿನ್ನುವುದರಿಂದ ತಲೆನೋವು ಕಮ್ಮಿಯಾಗುತ್ತದೆ.
ಬಾಯಿಯಲ್ಲಿನ ದುರ್ಗಂಧವೂ ಕಮ್ಮಿಯಾಗುತ್ತದೆ.
ಏಲಕ್ಕಿಯನ್ನು ಊಟವಾದ ತಕ್ಷಣ ತಿನ್ನುವುದರಿಂದಲೂ ಒಳ್ಳೆಯ ಪರಿಣಾಮಗಳನ್ನು ನೀಡುತ್ತದೆ.
ಇದು ನಮ್ಮ ದೇಹದಲ್ಲಿ ಅನೇಕ ರೀತಿಯ ಕ್ರಿಯೆಗಳಿಗೆ ಉತ್ತಮ ಸಹಕಾರವನ್ನು ಮಾಡುತ್ತದೆ.
ವಾಂತಿ,ಕೆಮ್ಮು , ಗ್ಯಾಸ ಪ್ರಾಬ್ಲಮ್ ಇತರೆ ತೊಂದರೆಗಳಿಗೆ ಪರಿಣಾಮಕಾರಿಯಾಗಿದೆ.


Media Files:
http://adigerecipes.blogspot.com




Turmeric - ಅರಿಶಿಣ/ಅರಿಸಿನ:

Wed, 14 Oct 2009 21:45:00 +0000

ಅರಿಶಿಣ / ಅರಿಸಿನದ ಉಪಯೋಗಗಳು:

ಅರಿಶಿಣ / ಅರಿಷಿಣ / ಅರಿಶಿನ / ಅರಿಸಿನ / ಹಳದಿ - ಇದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಆಗಾಗಿ ಎಲ್ಲ ಪದಗಳು ಬಳಕೆಯಲ್ಲಿವೆ.
                                    
                          (image) (image)

ಮ್ಮ ದೇಶದಲ್ಲಿ ಅರಿಶಿಣ ಮತ್ತು ಕುಂಕುಮಕ್ಕೆ ಒಂದು ಬಹಳ ಮಹತ್ತರವಾದ ಸ್ಥಾನವಿದೆ. ಇದು ಅಡಿಗೆಗಷ್ಟೇ ಸೀಮಿತವಾಗಿಲ್ಲ. ಅರಿಷಿಣಕ್ಕೆ ನಮ್ಮ ದೇಶದಲ್ಲಿ ಅದಕ್ಕಾಗಿಯೇ ಒಂದು ಪವಿತ್ರತೆಯನ್ನು ನೀಡಿದ್ದೇವೆ. ಅರಿಸಿನವನ್ನು ದೇವರಿಗೆ ಪೂಜಿಸಲು, ಬಾಗಿಲ ಹೊಸ್ತಿಲಿಗೆ ಇಡಲು, ಕುಂಕುಮಕ್ಕೆ ಕೊಡುವಾಗ ಮತ್ತು ಅಡಿಗೆಗೆ ಉಪಯೋಗಿಸುತ್ತೇವೆ. ಮುತ್ತೈದೆಯರು ಅದನ್ನು ಒಂದು ವರದಾನವೆಂದು ಉಪಯೋಗಿಸುವರು. ಅರಿಸಿಣ ಒಂದೇ ಈ ರೀತಿ ನಾನಾ ಬಗೆಯಲ್ಲಿ ಉಪಯೋಗಕ್ಕೆ ಬರುವುದು ಮತ್ತು ಅದನ್ನು ದಿನನಿತ್ಯ ಎಲ್ಲರೂ ಯಾವುದಕ್ಕಾದರೂ ಬಳಸಿಯೇ ಬಳಸುತ್ತಾರೆ.
ನಮ್ಮಗಳಿಗಂತೂ ಅರಿಶಿನ - ಕುಂಕುಮವಿಲ್ಲದೆ ಪೂಜೆ ಸಂಪೂರ್ಣವಾಗುವುದೇ ಇಲ್ಲ. ದೇವರ ಪೂಜೆಗಂತೂ ಹೂವಿಲ್ಲದಿದ್ದರೂ ಪರವಾಗಿಲ್ಲ. ಅರಿಷಿಣ- ಕುಂಕುಮವಂತೂ ಇರಲೇ ಬೇಕು. ಈಗಾಗಿ ಅರಿಶಿನವೂ ನಮ್ಮ ದಿನನಿತ್ಯದ ಅಡಿಗೆಯಲ್ಲಿ, ಪೂಜೆಯಲ್ಲಿ ಒಂದಾಗಿದೆ. ಮುತ್ತೈದೆಯರು ಪ್ರತಿದಿನ ಅದನ್ನು ಮಾಂಗಲ್ಯಕ್ಕೆ ಹಚ್ಚುವುದರಿಂದ ಶ್ರೇಯಸ್ಸು ಮತ್ತು ಒಳ್ಳೆಯದಾಗುವುದು. ಹೊಸಲಿಗೆ ಪ್ರತಿದಿನ ಇಡುವುದರಿಂದ ಕ್ರಿಮಿ-ಕೀಟಗಳ ಹತೋಟಿ ಇರುತ್ತದೆ ಮತ್ತು ಶುಭ ಸಂಕೇತವೂ ಆಗಿದೆ. ನಮ್ಮ ಬೆಳಗಿನ ಕೆಲಸಗಳು ಪ್ರಾರಂಭವಾಗುವುದೆ ಅರಿಸಿನದಿಂದ. ಒಳ್ಳೆಯ ಶುಭಕಾರ್ಯಗಳಿಗೂ ಸಹ ಅರಿಶಿನಕ್ಕೆ ಅದರದ್ದೇ ಆದ ಮಹತ್ವವಿದೆ. ಎಲ್ಲಾ ಶುಭ ಸಂದರ್ಭದಲ್ಲೂ ಇದನ್ನು ಬಳಸುತ್ತೇವೆ.
ಅರಿಶಿಣದ ಕೊಂಬು ಚಿನ್ನದ ಮಾಂಗಲ್ಯಕ್ಕೆ ಸಮಾನವಾಗಿದೆ, ಕೆಲವರು ಅರಿಷಿಣದ ಕೊಂಬನ್ನೆ ಮದುವೆಯಲ್ಲಿ ಮಾಂಗಲ್ಯವಾಗಿ ಉಪಯೋಗಿಸುವರು. ಆಗಾಗಿ ಇದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಮತ್ತು ಕಟ್ಟಲಾರದ ಬೆಲೆ ಇದೆ. ಅರಿಶಿನದ ದಾರ ಹೀಗೆ ಇದು ಹಲವಾರು ಬಗೆಯಲ್ಲಿ ಬಳಸಲು ಅನುಕೂಲವಾಗಿದೆ.


೧.ಅರಿಸಿನವನ್ನು ಹಾಲಿನ ಕೆನೆಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ, ಮುಖದಲ್ಲಿನ ಗುಳ್ಳೆಗಳು ಕಮ್ಮಿಯಾಗುತ್ತವೆ ಮತ್ತು ಹೊಳಪು ಬರುತ್ತದೆ.

೨.ಅರಿಸಿನದ ಪುಡಿಯನ್ನು ಕಡಲೆಹಿಟ್ಟಿಗೆ ಬೆರೆಸಿ,ಹಾಲಿನೊಂದಿಗೆ ಕಲೆಸಿ ಸಹ ಮುಖಕ್ಕೆ ಹಚ್ಚಬಹುದು.

೩.ಅರಿಶಿನದ ಪುಡಿಯನ್ನು ಸ್ವಲ್ಪ ಬಿಸಿ ಮಾಡಿದ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕೆಮ್ಮು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುತ್ತದೆ.

೪.ಇದು ಆಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡಿಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ.

೫.ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿರುವಾಗ ಈ ಅರಿಶಿಣದ ಪುಡಿಯನ್ನು ಗಾಯದ ಮೇಲೆ ಹಾಕಿ ಅದುವುದರಿಂದ ರಕ್ತ ಬರುವುದು ನಿಲ್ಲುತ್ತದೆ. (ಚಿಕ್ಕ ಗಾಯಗಳಿಗೆ) ಆಂಟಿಸೆಪ್ಟಿಕ್ ಆಗಿರುವುದರಿಂದ ಬೇಗನೆ ಗಾಯವೂ ಒಣಗುತ್ತದೆ/ಮಾಯುತ್ತದೆ.
೬.ಅರಿಶಿಣದ ಕೊಂಬನ್ನು ಹಾಲಿನಲ್ಲಿ ತೇದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಗುಳ್ಳೆಗಳು ಇಲ್ಲವಾಗುತ್ತವೆ ಮತ್ತು ಮುಖವು ಹೊಳಪು ಬರುತ್ತದೆ. ಇದು ಅರಿಷಿಣದ ಪುಡಿಯಲ್ಲಿ ಕಲೆಸಿ ಹಚ್ಚುವುದಕ್ಕಿಂತ ತುಂಬಾ ಉತ್ತಮವಾದದ್ದು. ಅಂಗಡಿಯಲ್ಲಿ ತಂದ ರೆಡಿಮೇಡ್ ಪುಡಿ ಉಪಯೋಗಿಸುವುದರಿಂದ ಹೆಚ್ಚು ಅನುಕೂಲ ದೊರೆಯದು, ಅದರಲ್ಲಿ ಕೆಲವು ಬಣ್ಣ ಮಿಶ್ರಿತವಾಗಿರುತ್ತವೆ. ಆದ್ದರಿಂದ ತೇದು ಹಚ್ಚುವುದರಿಂದ ಸ್ವಚ್ಛವಾದ ಅರಿಸಿನ ಸಿಗುತ್ತದೆ.


Media Files:
http://indianadigerecipes.blogspot.com




BAKING SODA TIPS

Tue, 12 May 2009 07:41:00 +0000

ಅಡಿಗೆ ಸೋಡದ ಉಪಯೋಗಗಳು:

. ಅಡಿಗೆ ಸೋಡಾದಿಂದ ಫ್ರಿಡ್ಜ್ ಅನ್ನು ಒರೆಸಿದರೆ ಅದರಲ್ಲಿರುವ ವಾಸನೆ ಹೋಗುತ್ತದೆ ಮತ್ತು ಶುಚಿಯಾಗುತ್ತದೆ.
. ನೆಲ ಒರೆಸುವಾಗ ಒಂದೆರಡು ಚಮಚ ಅಡಿಗೆ ಸೋಡವನ್ನು ನೀರಿನಲ್ಲಿ ಬೆರೆಸಿ ಒರೆಸಿದರೆ ಶುಭ್ರವಾಗುತ್ತದೆ.
. ಒಡವೆಗಳನ್ನು ಅಡಿಗೆ ಸೋಡಾದಿಂದ ತೊಳೆದಾಗ ಹೊಳೆಯುತ್ತವೆ.
. ಬೀರು ಒಳಗೆ,ಕಬೋರ್ಡ್ ಒಳಗೆ,ಅಡಿಗೆ ಕೋಣೆಗಳಲ್ಲಿ ಮತ್ತು ಫ್ರಿಡ್ಜ್ ಒಳಗೆ,ಒಂದು ಡಬ್ಬಿಯಲ್ಲಿ ಸೋಡಾ ಹಾಕಿ,ಡಬ್ಬಿಯನ್ನು ಮುಚ್ಚದೆ ತೆರೆದಿಟ್ಟು ಇಟ್ಟರೆ ಅವುಗಳಲ್ಲಿರುವ ಒಂದು ತರಹ ಕೆಟ್ಟವಾಸನೆ ಬರುವುದನ್ನು ಸೋಡಾ ಹೀರಿಕೊಳ್ಳುತ್ತದೆ.
. ಸಿಂಕ್ ಕಟ್ಟಿಕೊಂಡಾಗ ಅದಕ್ಕೆ ಅಡಿಗೆ ಸೋಡಾ ಮತ್ತು ವಿನಿಗರ್ ಅನ್ನು ಹಾಕಿ, ಒಂದೆರಡು ನಿಮಿಷದ ನಂತರ ಅದಕ್ಕೆ ಬಿಸಿನೀರನ್ನು ಹಾಕುವುದರಿಂದ ಕಟ್ಟಿಕೊಂಡಿರುವ ಸಿಂಕ್ ಕ್ಲೀನ್ ಆಗುತ್ತದೆ.
. ಪಾತ್ರೆಯನ್ನು ತೊಳೆಯುವಾಗ ವಾಶಿಂಗ್ ಲಿಕ್ವಿಡ್ ಜೊತೆ ಸ್ವಲ್ಪ ಸೋಡಾ ಮತ್ತು ವಿನಿಗರ್ ಅನ್ನು ಬೆರೆಸಿಕೊಂಡು ಪಾತ್ರೆಯನ್ನು ತೊಳೆದರೆ ಪಾತ್ರೆಗಳು ಸ್ವಚ್ಛವಾಗುತ್ತವೆ ಮತ್ತು ಹೊಳೆಯುತ್ತವೆ.
. ವಿನಿಗರ್ ಹಾಕಿ ಪಾತ್ರೆಯನ್ನು ತೊಳೆಯುವುದರಿಂದ ಪಾತ್ರೆಯಲ್ಲಿನ ಕೆಟ್ಟ ಕಟು ವಾಸನೆಗಳು ಹೋಗುತ್ತವೆ.


Media Files:
http://adigerecipes.blogspot.com




OM SHRI GANESHAYA NAMAH:

Mon, 11 May 2009 07:41:00 +0000

" ಓಂ ಶ್ರೀ ಮಹಾ ಘಂ ಗಣಪತೆಯೇ ನಮಃ "


Media Files:
http://indiankannadarecipes.blogspot.com




Roti and Chapati Tips - ರೊಟ್ಟಿ ಮತ್ತು ಚಪಾತಿಯ ಟಿಪ್ಸ್

Mon, 16 Feb 2009 20:59:00 +0000




ರೊಟ್ಟಿ ಮತ್ತು ಚಪಾತಿಯ ಟಿಪ್ಸ್:

೧. ರೊಟ್ಟಿ ಮಾಡುವಾಗ ಸ್ವಲ್ಪ ನೀರನ್ನು ಕುದಿಸಿ, ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಸ್ವಲ್ಪ ನಿಮಿಷ ಬಿಟ್ಟು ಅದನ್ನು ಗೊಟಾಯಿಸಿ, ಕಲೆಸಿ, ಚೆನ್ನಾಗಿ ನಾದಿ ರೊಟ್ಟಿ ಮಾಡಿದರೆ ರೊಟ್ಟಿಗಳು ದೋಸೆಯಂತೆ ಮೃದುವಾಗಿ ಬರುತ್ತವೆ. (ಇದು ಒಂದು ರೀತಿ)
೨. ರೊಟ್ಟಿ ಹಿಟ್ಟನ್ನು ಕಲೆಸುವಾಗ ಅದಕ್ಕೆ ಒಂದು/ಎರಡು ಚಮಚ ಡಾಲ್ಡ ಅಥವಾ ವೆಜೆಟಬಲ್ ಗೀಯನ್ನು ಮತ್ತು ನೀರಿನ ಜೊತೆ ಹಾಲನ್ನು ಸೇರಿಸಿ ಕಲೆಸಿ, ಚೆನ್ನಾಗಿ ನಾದಿ,ರೊಟ್ಟಿ ಮಾಡಿದರೆ ರೊಟ್ಟಿಗಳು ಮೃದುವಾಗಿ ಬರುತ್ತದೆ ಮತ್ತು ಬೇಯಿಸುವಾಗ ಉಬ್ಬುತ್ತದೆ.(ಈ ರೀತಿ ಸಹ ಒಂದು)
೩. ಇದೇರೀತಿ ಚಪಾತಿ ಹಿಟ್ಟಿಗೂ ಕಲೆಸಿದರೆ ಚಪಾತಿಗಳು ಸಹ ಚೆನ್ನಾಗಿ ಮೃದುವಾಗಿ ಬರುತ್ತವೆ ಮತ್ತು ರುಚಿಯಾಗಿಯೂ ಇರುತ್ತದೆ.
೪. ಚಪಾತಿ ಹಿಟ್ಟನ್ನು ತುಂಬಾ ಹೊತ್ತಿನವರೆಗೂ ಕಲೆಸಿ ಇಡಬೇಡಿ. ತುಂಬಾ ಹೊತ್ತು ನೆನೆಸಿದರೆ ಅದರಲ್ಲಿರುವ ಅಂಶಗಳೆಲ್ಲಾ ಹಾಳಾಗುತ್ತವೆ. ಅರ್ಧ ಅಥವಾ ಮುಕ್ಕಾಲು ಗಂಟೆ ನೆನೆಸಿದರೆ ಸಾಕು. ಹೆಚ್ಚೆಂದರೆ ಹದಿನೈದು ನಿಮಿಷಗಳಷ್ಟೇ ಸಾಕು.
೫. ಚಪಾತಿ ಹಿಟ್ಟನ್ನು ಕಲೆಸಿ ತಂಗಳು ಪೆಟ್ಟಿಗೆಯಲ್ಲಿ ಸಹ ಇಟ್ಟು ಉಪಯೋಗಿಸಿದರೆ ಅದರಲ್ಲಿನ ಸತ್ವಗಳೆಲ್ಲಾ ನಶಿಸುತ್ತವೆ.
೬. ಹಿಟ್ಟನ್ನು ತುಂಬಾ ಹೊತ್ತು ನೆನೆಸಿದರೆ ಚಪಾತಿಗಳೇನೋ ಮೃದುವಾಗಿ ಬರುತ್ತವೆ,ಆದರೆ ಅದರಲ್ಲಿನ ಒಳ್ಳೆಯ ಸತ್ವಯುತ ಅಂಶಗಳು ಇರುವುದಿಲ್ಲ.
೭. ಗೋಧಿ ಹಿಟ್ಟು ಬೀಸಲು ಕೊಡುವಾಗ ಅದಕ್ಕೆ ಮೆಂತ್ಯ,ಹೆಸರುಕಾಳು ಮತ್ತು ಉಪ್ಪು ಹಾಕಿ ಬೀಸಿಟ್ಟುಕೊಂಡರೆ,ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.ಜೊತೆಯಲ್ಲಿ ಸೋಯಾಬೀನ್ಸ್ ಸಹ ಸೇರಿಸಬಹುದು.
೮. ರಾಗಿ ರೊಟ್ಟಿ ತಯಾರಿಸುವಾಗ ರಾಗಿ ಹಿಟ್ಟಿನೊಂದಿಗೆ ಸ್ವಲ್ಪ ಗೋಧಿಹಿಟ್ಟು ಸೇರಿಸಿ ಕಲೆಸಿ,ರೊಟ್ಟಿ ತಯಾರಿಸಿದರೆ,ರೊಟ್ಟಿಗಳು ಮುರಿದುಕೊಳ್ಳದೆ ಚೆನ್ನಾಗಿ ಬರುತ್ತವೆ.
೯. ಯಾವುದೇ ತರಹದ ರೊಟ್ಟಿಗಳು ತಯಾರಿಸುವಾಗ ಕೆಲವೊಮ್ಮೆ ಅದಕ್ಕೆ ಕೆಲವು ತರಕಾರಿಗಳನ್ನು ಸೇರಿಸಿ ತಯಾರಿಸಿದರೆ, ರುಚಿಯೂ ಬೇರೆ ರೀತಿಯಾಗಿ ಚೆನ್ನಾಗಿರುತ್ತದೆ. ಮತ್ತು ವಿಟಮಿನ್ಸ್ ಮತ್ತು ಪ್ರೋಟಿನ್ಸ್ ಸಿಗುತ್ತದೆ ಹಾಗೂ ಬಗೆಬಗೆಯ ರೊಟ್ಟಿಗಳನ್ನು ಸವಿಯಬಹುದು.


Media Files:
http://indiankannadarecipes.blogspot.com




Washing tips for Copper/Brass Things

Thu, 12 Feb 2009 06:42:00 +0000

ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಿಗೆ ಹುಣಸೇಹಣ್ಣು ಮತ್ತು ಉಪ್ಪು ಹಾಕಿ ಉಜ್ಜಿ, ತೊಳೆಯುವುದರಿಂದ ತಾಮ್ರ/ಹಿತ್ತಾಳೆ ವಸ್ತುಗಳು ಹೊಳೆಯುತ್ತವೆ.
ಕೆಮ್ಮಣ್ಣು ಸಹ ಹಾಕಿ ಉಜ್ಜಿ ತೊಳೆಯುವುದರಿಂದಲೂ ತಾಮ್ರ/ಹಿತ್ತಾಳೆ ವಸ್ತುಗಳು ಹೊಳೆಯುತ್ತವೆ.
ಆದಷ್ಟು ಪೀತಾಂಬರಿ ಅಂತಹ ಪೌಡರ್ ಗಳನ್ನು ಉಪಯೋಗಿಸದಿರಿ, ಇದರಿಂದ ನಿಮಗೆ ಕೆಲವು ತೊಂದರೆಗಳು ಉಂಟಾಗುತ್ತವೆ. ಅದರಲ್ಲಿ ಕೆಮಿಕಲ್ಸ್ ಹಾಕಿರುವುದರಿಂದ ಅದು ಅಷ್ಟು ಒಳ್ಳೆಯದಲ್ಲ.



Fenugreek Seeds - ಮೆಂತ್ಯ:

Sun, 20 Jan 2008 09:42:00 +0000

ಮೆಂತ್ಯ:

- ಒಂದೆರಡು ಚಮಚ ಮೆಂತ್ಯದ ಕಾಳುಗಳನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರಿನ ಜೊತೆ ತೆಗೆದುಕೊಂಡರೆ ತುಂಬಾ ಒಳ್ಳೆಯದು.
- ಮೆಂತ್ಯದ ಕಾಳುಗಳು ಮಧುಮೇಹ ರೋಗಿಗಳಿಗೆ ಉತ್ತಮ. ಅವರು ಈ ಕಾಳುಗಳನ್ನು ಯಾವ ರೀತಿಯಲ್ಲಾದರೂ ಪ್ರತಿದಿನ ಸೇವಿಸಿದ್ದರೆ ಬಹಳ ಒಳ್ಳೆಯದು.
- ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ರುಬ್ಬಿ ತಲೆಗೆ ಹಚ್ಚಿ, ಸ್ನಾನ ಮಾಡುವುದರಿಂದ ತಂಪು ಮತ್ತು ಕೂದಲಿಗೆ ಒಳ್ಳೆಯದು.



COOKING / KITCHEN TIPS - ಅಡಿಗೆ ಮನೆಯ ಕೆಲವು ಉಪಯುಕ್ತ ಮಾಹಿತಿಗಳು:

Mon, 16 Apr 2007 16:22:00 +0000

ಅಡಿಗೆ ಮನೆಯ ಕೆಲವು ಉಪಯುಕ್ತ ಮಾಹಿತಿಗಳು:* ಅಡಿಗೆ ತಯಾರಿಸುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಮಧ್ಯದಲ್ಲಿ ಫೋನ್ ಅಥವ ಬಾಗಿಲುಗಳನ್ನು ಮುಟ್ಟಿ ಬಂದಿದ್ದರೆ, ಕೈಗಳನ್ನು ತೊಳೆದುಕೊಂಡು ಅಡಿಗೆ ಮುಂದುವರಿಸಿ, ಇಲ್ಲವೆಂದರೆ ಫುಡ್ ಪಾಯಿಸನ್ ಆಗುತ್ತದೆ.* ತರಕಾರಿಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿ, ಉಪಯೋಗಿಸಿ.* ಹಣ್ಣುಗಳನ್ನು ಕೂಡ ತೊಳೆದು ತಿನ್ನಿ.* ಸೊಪ್ಪುಗಳನ್ನು ಐದರಿಂದ ಆರುಬಾರಿಯಾದರೂ ತೊಳೆಯಿರಿ, ನೀರಿನಲ್ಲಿ ನೆನಸುವಾಗ ಅದಕ್ಕೆ ಸ್ವಲ್ಪ ವಿನಿಗರ್ ಮತ್ತು ಉಪ್ಪನ್ನು ಹಾಕಿ ತೊಳೆಯುವುದರಿಂದ ಅದರಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ ಮತ್ತು ತಾಜಾ ಸಹ ಆಗುತ್ತದೆ.* ಕಾಳು - ದಿನಸಿಗಳಿಗೆ ಹುಳ ಹಿಡಿಯದಂತೆ ಡಬ್ಬಕ್ಕೆ ಲವಂಗ ಹಾಕಿಡಿ. ಕೆಲವನ್ನು ರೆಫ್ರಿಜರೇಟರ್ ನಲ್ಲಿ ಇಡಿ.* ಸಕ್ಕರೆಗೆ ಇರುವೆ ಬಂದರೆ ಲವಂಗ ಹಾಕಿಡಿ.* ಅಕ್ಕಿಯನ್ನು ಇಡುವ ಜಾಗದಲ್ಲಿ ಬೇವಿನ ಎಲೆ / ಲವಂಗ / ಒಣ ಮೆಣಸಿನಕಾಯಿ / ಈರುಳ್ಳಿ ಇಟ್ಟರೆ ಅಲ್ಲಿ ಅಕ್ಕಿಯೂ ಹುಳ ಬರುವುದಿಲ್ಲ. ಅಕ್ಕಿ ಡಬ್ಬಕ್ಕೆ ಮೇಲ್ಭಾಗ ಮತ್ತು ಮುಚ್ಚಳಕ್ಕೆ ಎಣ್ಣೆ ಹಚ್ಚಿ ಇಟ್ಟರೆ ಅದರಲ್ಲಿ ಹುಳ ಇದ್ದರೆ ಅದು ಮೇಲೆ ಬರದಂತೆ ಹುಳುಗಳು ಅಲ್ಲೆ ಇರುತ್ತವೆ. ಇಲ್ಲವೆಂದರೆ ಎಲ್ಲಾ ಕಡೆಯೂ ಹುಳ ಹರಡಿಕೊಳ್ಳುತ್ತವೆ.* ಅನ್ನ ಮಾಡುವಾಗ ನಿಂಬೆರಸ ಮತ್ತು ಎಣ್ಣೆ ಹಾಕಿದರೆ ಅನ್ನ ಉದುರು-ಉದುರಾಗುತ್ತದೆ.* ಸಾರಿಗೆ ಉಪ್ಪು ಜಾಸ್ತಿ ಆದರೆ ಅದಕ್ಕೆ ಆಲೂಗೆಡ್ಡೆ ಯನ್ನು ಅರ್ಧಕ್ಕೆ ಕತ್ತರಿಸಿ ಹಾಕಿ ಎರಡು ನಿಮಿಷ ಕುದಿಸಿ,ತೆಗೆಯಿರಿ.ಆಲೂಗೆಡ್ಡೆಯೂ ಉಪ್ಪನ್ನು ಹೀರಿಕೊಂಡಿರುತ್ತದೆ. ಅಥವಾ ಅನ್ನದ ಸಣ್ಣ ಉಂಡೆಯನ್ನು ಮಾಡಿಕೊಂಡು ಅದನ್ನು ಸಾರಿಗೆ ತೇಲಿಬಿಟ್ಟು ಸ್ವಲ್ಪ ಹೊತ್ತಾದ ಮೇಲೆ ಅನ್ನ ಬಿಟ್ಟುಕೊಳ್ಳದಂತೆ ಉಂಡೆ ತೆಗೆದು ಹಾಕಿ, ಅದು ಉಪ್ಪನ್ನು ಹೀರಿಕೊಂಡಿರುತ್ತದೆ. ಇಲ್ಲವೆಂದರೆ ಸಾರಿಗೆ ನಿಂಬೆರಸ ಮತ್ತು ಸ್ವಲ್ಪ ನೀರು ಸೇರಿಸಿ, ನಿಂಬೆರಸದಿಂದ ರುಚಿಯೂ ಹೆಚ್ಚುತ್ತದೆ.* ಮೊಟ್ಟೆಯನ್ನು ಬೇಯಿಸುವಾಗ ಆ ನೀರಿಗೆ ಸ್ವಲ್ಪ ವಿನಿಗರ್ ಮತ್ತು ಉಪ್ಪು ಹಾಕಿ ಬೇಯಿಸಿದರೆ, ಮೊಟ್ಟೆಗಳು ಹೊಡೆದು ಕೊಳ್ಳದೆ ಚೆನ[...]


Media Files:
http://indiankannadarecipes.blogspot.com




NELLIKAAYI / AMLA / GOOSEBERRY- ನೆಲ್ಲಿಕಾಯಿ:

Sun, 15 Apr 2007 16:22:00 +0000

(image)
ನೆಲ್ಲಿಕಾಯಿ:

೧.ಪಪ್ಪಾಯ ಹಣ್ಣಿಗೆ ನೆಲ್ಲಿಕಾಯಿ ಚಚ್ಚಿದ್ದು ಹಾಕಿ, ಅದಕ್ಕೆ ಬೇಕಾದರೆ ಸಕ್ಕರೆ ಹಾಕಿ ಸೇವನೆ ಮಾಡಿದರೆ ಕಣ್ಣಿಗೆ ಒಳ್ಳೆಯದು. ಇದರಿಂದ ಕಣ್ಣಿಗೆ ಬಲ ಮತ್ತು ಶಕ್ತಿ ಬರುತ್ತದೆ. ಕಣ್ಣುರಿ, ಮಂದದೃಷ್ಠಿ, ಕಣ್ಣಲ್ಲಿ ನೀರು ಬರುವುದು, ಕಣ್ಣಿನ ಆಯಾಸಕ್ಕೆ ಇದು ಒಳ್ಳೆಯ ಮದ್ದು.

೨.ನೆಲ್ಲಿಕಾಯಿ ಕಷಾಯದಲ್ಲಿ ಕೂದಲು ನೆನೆಸಿ, ತೊಳೆದರೆ,ಕೂದಲು ಉದ್ದ ಮತ್ತು ಹೊಳಪಾಗುತ್ತದೆ.
೩.ನೆಲ್ಲಿಕಾಯಿ ಪೇಸ್ಟ್ ನ್ನು ಬಿಸಿನೀರಿಗೆ ಹಾಕಿ, ತಲೆ ಬುಡಕ್ಕೆ ಹಚ್ಚಿ, ನೆನಯಲು ಬಿಟ್ಟು, ನಂತರ ತೊಳೆದು ಕೊಂಡರೆ ಸಹ ಒಳ್ಳೆಯ ಪರಿಣಾಮ ಬೀರುತ್ತದೆ.


Media Files:
http://indiankannadarecipes.blogspot.com




SWAGATHA

Sat, 14 Apr 2007 16:22:00 +0000

ಆ ಭಗವಂತನಿಂದ ನಮಗೆ ದೈವದತ್ತವಾಗಿ ಬಂದಿರುವ ಈ ಸೃಷ್ಟಿಯಲ್ಲಿ ಅನೇಕ ಗಿಡಮೂಲಿಕೆಗಳಿವೆ. ಪ್ರಕೃತಿಯಲ್ಲಿ ಕೆಲವಂತೂ ತುಂಬಾ ಉಪಯುಕ್ತವಾದವು. ಗಿಡ,ಮರ,ಬೇರು,ಚೆಕ್ಕೆ,ಎಲೆ,ಹೂವು,ಕಾಯಿ,ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಕಾಳುಗಳು,ನಮ್ಮ ನಿತ್ಯ ಜೀವನದಲ್ಲಿ ಬಹಳವಾಗಿ ಬಳಸುತ್ತೇವೆ.ಅವುಗಳಲ್ಲಿ ಕೆಲವನ್ನೂ ಉಪಯೋಗಿಸುವ ರೀತಿ ಮತ್ತು ಮನೆಮದ್ದು ಮಾಡಿಕೊಂಡು ಅವೆಲ್ಲವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ತಿಳಿಯೋಣ.ಉಪಯುಕ್ತ ಮಾಹಿತಿ ಮತ್ತು ಮನೆಮದ್ದು ತಯಾರಿಸುವ ಈ ಸಿರಿಗಂಧ ಟಿಪ್ಸ್ ಬ್ಲಾಗ್ ಗೆ ಸುಸ್ವಾಗತ.


Media Files:
http://kannadareceipes.blogspot.com




ಸ್ತೋತ್ರಗಳು

Fri, 13 Apr 2007 08:07:00 +0000

" ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ
"


Media Files:
http://indiankannadarecipes.blogspot.com




OM SHRI GANESHAYA NAMAH:

Thu, 12 Apr 2007 07:41:00 +0000

" ಓಂ ಶ್ರೀ ಮಹಾ ಘಂ ಗಣಪತೆಯೇ ನಮಃ "
(image)


Media Files:
http://indiankannadarecipes.blogspot.com